Wednesday, April 17, 2024

ಸುಬ್ರಹ್ಮಣ್ಯ ಇನ್ನರ್ ವಿಲ್ ಕ್ಲಬ್ ನಲ್ಲಿ ಆಟಿಡೊಂಜಿ ದಿನ

ಸುಬ್ರಹ್ಮಣ್ಯ ಇನ್ನರ್ವೀಲ್ ಕ್ಲಬ್ ವತಿಯಿಂದ ಕ್ಲಬ್ ನ ಅಧ್ಯಕ್ಷ ವೇದ ಶಿವರಾಂ ಅವರ ಏನೆಕಲ್ಲು ಮನೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ನಡೆಸಲಾಯಿತು.

ತುಳುನಾಡಿನಲ್ಲಿ ಆತಿ ತಿಂಗಳಲ್ಲಿ ತಯಾರಿಸುವ ಆರೋಗ್ಯಕರ ವಿವಿಧ ಖಾದ್ಯಗಳನ್ನು ಪ್ರತಿಯೊಬ್ಬ ಸದಸ್ಯರು ಮನೆಯಲ್ಲಿ ಮಾಡಿ ತಂದು ಒಟ್ಟಿಗೆ ಸೇರಿ ಸಂತೋಷಕೂಟದೊಂದಿಗೆ ಆಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಸದಸ್ಯರುಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಹಾಗೂ ಆಟಿಯ ತಿಂಗಳಲ್ಲಿ ಹಾಡುವ ಪದಗಳು, ಆಟಗಳು, ನೃತ್ಯಗಳು ಆಚರಣೆಗೆ ಮೇರುಗನ್ನ ತಂದಿತು.

ಇನ್ನರ್ವೀನ್ ಕ್ಲಬ್ ನ ಪೂರ್ವ ಅಧ್ಯಕ್ಷರುಗಳಾದ ಶೋಭಾ ಗಿರಿಧರ್, ಭಾರತಿ ದಿನೇಶ್, ಸಚಿತ ಗೋಪಾಲ್, ಸರೋಜಾ ಮೈಲಪ್ಪ, ಲೀಲಾ ವಿಶ್ವನಾಥ್ ,ಕ್ಲಬ್ ನ ಕಾರ್ಯದರ್ಶಿ ಶ್ರುತಿ ಮಂಜುನಾಥ್, ಸದಸ್ಯರುಗಳಾದ ವಿಮಲ ರಂಗಯ್ಯ, ಚಂದ್ರಾವತಿ ಹೊನ್ನಪ್ಪ, ಗೀತಾ ರವಿ ಕಕ್ಕೆ ಪದವ್ ,ಶ್ರೀಜಾ ಚಂದ್ರಶೇಖರ ನಾಯರ್ , ಸುನಿತಾ ನವೀನ್, ಸೋನು ಭಟ್, ಯಶ್ಮಿತಾ ಅತ್ಯಾಡಿ, ಹಾಗೂ ಸಾಹಿತ್ಯ ಪ್ರವೀಣ್ ಮುಂಡೋಡಿ ಹಾಜರಿದ್ದರು

More from the blog

ಬಂಟ್ವಾಳದ ನರಿಕೊಂಬು ಗ್ರಾಮದಲ್ಲಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

2024 ರ ಎ. 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವ ನಿಟ್ಟಿನಲ್ಲಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ" ಎಂಬ...

ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ಆತ್ಮಹತ್ಯೆ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಮಹಿಳೆಯೊಬ್ಬರು ತಂದೆ ಹಾಗೂ ಪುತ್ರಿಯ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು‌ ನಡೆದಿದೆ. ಕುಮ್ಡೇಲು ನಿವಾಸಿ ಉಮೇಶ್ ಬೆಳ್ಚಡರ ಪತ್ನಿ...

ಏ.19 -28: ಇತಿಹಾಸ ಪ್ರಸಿದ್ಧ ಕಟ್ಟತ್ತಿಲ ಉರೂಸ್

ವಿಟ್ಲ: ಸಾಲೆತ್ತೂರು ಗ್ರಾಮದ ಕಟ್ಟತ್ತಿಲದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಇತಿಹಾಸ ಪ್ರಸಿದ್ಧ ಅಸ್ಸಯ್ಯಿದ್ ವಲಿಯುಲ್ಲಾಹಿ (ಖ.ಸಿ) ಅವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಮತ್ತು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ...

ಲೋಕಸಭಾ ಚುನಾವಣೆ : ದಕ್ಷಿಣ ಕನ್ನಡ ಕ್ಷೇತ್ರದ ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ನೇಮಕ

ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ಅವರನ್ನು ನೇಮಕ ಮಾಡಲಾಗಿದೆ.