ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ನೈಜ್ಯ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ ಆಗಸ್ಟ್ 27ರಂದು ವಾಮದಪದವಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರ ಉಪಸ್ಥಿತಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.
ಬೆಳಿಗ್ಗೆ 9ಗಂಟೆಗೆ ವಾಮದಪದವು ನೀಲಿ ನೀಲಕಂಠೇಶ್ವರ ದೇವಸ್ಥಾನದಿಂದ ವಾಹನ ಜಾಥ ಹೊರಟು ಮಾವಿನಕಟ್ಟೆ ಕೇಂದ್ರ ಮೈದಾನದಲ್ಲಿ ಸೌಜನ್ಯ ಸಾವಿನ ಪೂರ್ಣ ಪ್ರಮಾಣದ ತನಿಖೆಗೆ ಹೋರಾಟ ನಡೆಯಲಿದೆ ಎಂದು ವಾಮದಪದವು ಹೋರಾಟ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.