Wednesday, October 18, 2023

ಭಿನ್ನ ಸಾಮರ್ಥ್ಯದ ಬಾಲಕಿಯ ಅತ್ಯಾಚಾರ : ಆರೋಪಿ, ಸಹಕರಿಸಿದ ಮಹಿಳೆ ಬಂಧನ

Must read

ಮಂಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಭಿನ್ನ ಸಾಮರ್ಥ್ಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕುರಿತು ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯವೆಸಗಿದ ಆರೋಪಿಯನ್ನು ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ ನಿವಾಸಿಯಾಗಿರುವ ಬಿಹಾರದ ಅಬ್ದುಲ್ ಹಲೀಂ ಹಾಗೂ ಕುಲಶೇಖರ ನಿವಾಸಿ ಶಮೀನಾ ಬಾನು ಬಂಧಿತ ಆರೋಪಿಗಳು.

ನಗರಕ್ಕೆ ಬಂದಿದ್ದ ಅಬ್ದುಲ್ ಹಲೀಂ ಗೆಳೆಯನ ಜೊತೆ ಆ.10 ರಂದು ಬೈಕಿನಲ್ಲಿ ಕಾಸರಗೋಡಿಗೆ ಹೋಗಿ ಮರಳುತ್ತಿದ್ದಾಗ ಮಂಜೇಶ್ವರ ಹಾಗೂ ಹೊಸಂಗಡಿ ಮಧ್ಯೆ ಬೈಕ್‌ ಅಪಘಾತವಾಗಿತ್ತು. ಅವರಿಬ್ಬರೂ ಗಾಯಗೊಂಡಿದ್ದರು. ನಗರದ ಆಸ್ಪತ್ರೆಯೊಂದರಲ್ಲಿ ಒಂದೇ ರೂಮಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಭಿನ್ನ ಸಾಮರ್ಥ್ಯದ ಬಾಲಕಿಯೊಬ್ಬಳನ್ನು ಆಕೆಯ ಪೋಷಕರು ಆಸ್ಪತ್ರೆಯಲ್ಲಿ ಶಮೀನಾ ಬಾನು ಜತೆ ಬಿಟ್ಟು ಹೋಗಿದ್ದರು. ಆರೋಪಿಯು ಶಮಿನಾ ಬಾನು ಸಹಾಯ ಪಡೆದು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಬಗ್ಗೆ ಆಕೆಯ ತಾಯಿ ಮಹಿಳಾ ಠಾಣೆಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ರೋ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅತ್ಯಾಚಾರಕ್ಕೆ ಸಹಕರಿಸಿದ ಆರೋಪಿ ಶಮೀನಾ ಬಾನುವನ್ನು ಆ.16ರಂದೇ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪ್ರಕರಣದ ಆರೋಪಿ ಅಬ್ದುಲ್ ಹಲೀಂ ಆ.16ರಂದು ಮುಂಬಯಿಗೆ ಹೋಗುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಹಿಳಾ ಠಾಣಾ ಇಸ್ಪೆಕ್ಟರ್ ಹಾಗೂ ಸಿಬ್ಬಂದಿ ಗೋವಾದ ಮಡಂಗಾವ್‌ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ

More articles

Latest article