Wednesday, October 18, 2023

ಪುದು ಗ್ರಾ.ಪಂ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಛದ್ಮವೇಷ,ದೇಶಭಕ್ತಿ ಗೀತೆ ಗಾಯನ, ಪ್ರಬಂಧ, ಜನಪದ ನೃತ್ಯ ಸ್ಪರ್ಧೆ

Must read

ಇಂದು ಪುದು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಹಾಗೂ ಪುದು ಗ್ರಾಮ ಪಂಚಾಯತ್ ಸಾರಥ್ಯದಲ್ಲಿ 76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಪ್ರಯುಕ್ತವಾಗಿ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಛದ್ಮವೇಷ,ದೇಶಭಕ್ತಿ ಗೀತೆ ಗಾಯನ, ಪ್ರಬಂಧ ಹಾಗೂ ಜನಪದ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು ಹಾಗೂ ಸ್ಪರ್ಧಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಶೀದಾ ಬಾನು, ಪುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ ಎ, ಗ್ರಾಮ ಪಂಚಾಯತ್ ಸದಸ್ಯರಾದ ಎಫ್ ಎಚ್ ಮೊಹಮ್ಮದ್, ರಮ್ಲಾನ್ ಮಾರಿಪಳ್ಳ, ಶ್ರೀಮತಿ ಸುಗುಣ, ಶ್ರೀಮತಿ ನೆಬಿಸಾ, ಶ್ರೀಮತಿ ಸಾರ ಜೈದ್, ಶ್ರೀ ಮಹಮದ್ ಅನ್ಸ್, ಶ್ರೀಮತಿ ಬದ್ರುನ್ನಿಸ ಪರಂಗಿಪೇಟೆ ಹಾಗೂ ಸ್ಪರ್ಧೆಯ ಮುಖ್ಯ ತೀರ್ಪುಗಾರರಾಗಿ ಶ್ರೀಮತಿ ಪ್ರತಿಮಾ ಕಲ್ವಾಜೆ, ಕುಮಾರಿ ಲಿಖಿತಾ, ಶ್ರೀ ಭಾಸ್ಕರ್ ರೈ ಉಪಸ್ಥಿತರಿದ್ದರು.

ಕುಮಾರಿ ಸೌಮ್ಯ ಗ್ರಂಥಾಲಯ ಮೇಲ್ವಿಚಾರಕರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಅಬ್ದುಲ್ ಸಲಾಂ ಪಂಚಾಯತ್ ಸಿಬ್ಬಂದಿ ಇವರು ಬಂದ ಅತಿಥಿಗಳನ್ನು ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಅಬೂಬಕ್ಕರ್, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರು

More articles

Latest article