ಹೊಸದಿಲ್ಲಿ: ಕಬಡ್ಡಿ ಪ್ರೀಯರಿಗೆ ಇಂದು ಗುಡ್ ನ್ಯೂಸ್ ಸಿಕ್ಕಿದ್ದು, ಪ್ರೋ ಕಬಡ್ಡಿ ಲೀಗ್ ಇದೇ ಡಿಸೆಂಬರ್ 2ರಿಂದ ಆರಂಭವಾಗಲಿದೆ ಎಂದು ಮಶಾಲ್ ಸ್ಫೋ ರ್ಟ್ಸ್ ನ ಮುಖ್ಯಸ್ಥ ಮತ್ತು ಪಿಕೆಎಲ್‌ನ ಲೀಗ್ ಕಮಿಷನರ್ ಆಗಿರುವ ಅನುಪಮ್ ಗೋಸ್ವಾಮಿ ತಿಳಿಸಿದರು.
ಮುಂಬಯಿಯಲ್ಲಿ ಸೆ. 8 ಮತ್ತು 9ರಂದು ಪ್ರೊ ಕಬಡ್ಡಿ ಹರಾಜು ನಡೆಯಲಿದೆ. ಸುಮಾರು 500 ಆಟಗಾರರ ಹೆಸರು ಇದರಲ್ಲಿ ಗೋಚರಿಸುವ ಸಾಧ್ಯತೆ ಇದೆ. ಪ್ರತೀ ಫ್ರಾಂಚೈಸಿಗಳಿಗೆ 7 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಇದರಿಂದ 84 ಆಟಗಾರರು ರಿಟೈನ್ ಆಗಲಿದ್ದಾರೆ. ಇದರ ಯಾದಿ ಕೂಡ ಪ್ರಕಟಗೊಂಡಿದೆ. ಬೆಂಗಳೂರು ಬುಲ್ಸ್ ಉಳಿಸಿಕೊಂಡಿರುವ ಆಟಗಾರರೆಂದರೆ ನೀರಜ್ ನರ್ವಾಲ್, ಸೌರಭ್ ನಂದಲ್, ಯಶ್ ಹೂಡಾ, ಭರತ್ ಮತ್ತು ಅಮಾನ್.
ಈ ಬಾರಿಯ ಹರಾಜಿನಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ -2023ರ ಫೈನಲಿಸ್ಟ್ ತಂಡಗಳ 24 ಆಟಗಾರರಿಗೆ ಅವಕಾಶ ನೀಡಲಾಗು ವುದು. ಹೀಗಾಗಿ ಹೊಸಮುಖಗಳ ದರ್ಶನವಾಗುವ ಸಾಧ್ಯತೆ ಹೆಚ್ಚಿದೆ.
ತಂಡಗಳ ವಿವರ: ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ದಬಾಂಗ್ ಡೆಲ್ಲಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುಣೇರಿ ಪಲ್ಟನ್, ತಮಿಳ್ ತಲೈವಾಸ್, ತೆಲುಗು ಟೈಟಾನ್ಸ್, ಯು ಮುಂಬಾ ಮತ್ತು ಯುಪಿ ಯೋಧಾಸ್.