Wednesday, October 18, 2023

ಎನ್‌.ಐ.ಎ.ಪೋಲೀಸರಿಂದ ನಂದಾವರದ ಮನೆಯೊಂದಕ್ಕೆ ದಾಳಿ

Must read

ಬಂಟ್ವಾಳ: ಎನ್.ಐ.ಎ.ಪೋಲೀಸರು ಮತ್ತೆ ದ.ಕ.ಜಿಲ್ಲೆಯಲ್ಲಿ ಬೇಟೆಯಾಡಿದ್ದು ಒಟ್ಟು 5 ಮಂದಿಯ ಮನೆಗಳಿಗೆ ಇಂದು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಬಂಟ್ವಾಳ ತಾಲೂಕಿನ ಎರಡು ಕಡೆಗಳಲ್ಲಿ ದಾಳಿ ನಡೆಸಿದ ಪೋಲೀಸರ ತಂಡ ಮನೆಗಳಲ್ಲಿ ಪ್ರಮುಖ ದಾಖಲೆಗಳಿಗಾಗಿ ಸರ್ಚ್ ಮಾಡಿದೆ.

ನಂದಾವರ ಬೋಗೊಡಿ ನಿವಾಸಿ ಇಬ್ರಾಹಿಂ ನಂದಾವರ ಹಾಗೂ

ಕುಂಪಣಮಜಲು ನಿವಾಸಿಯಾಗಿದ್ದ ಪ್ರಸ್ತುತ ವಳಚ್ಚಿಲ್ ನಿವಾಸಿಯಾಗಿರುವ ಮುಸ್ತಾಕ್ ಎಂಬವರ ಮನೆಗೆ ದಾಳಿ ನಡೆಸಿದ ಎನ್.ಐ.ಎ ಪೋಲೀಸರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದೆ ಎಂದು ಹೇಳಲಾಗಿದೆ.

ಹೈದರಾಬಾದ್ ನಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಂದು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

More articles

Latest article