ಬಂಟ್ವಾಳ: ನಿಗಮ ಫ್ರೆಂಡ್ಸ್ ನಂದಾವರ ಹಾಗೂ ಆಡಳಿತ ಕಮಿಟಿ, ಕೇಂದ್ರ ಜುಮಾ ಮಸೀದಿ ನಂದಾವರ ಇದರ ವತಿಯಿಂದ ” ನಮ್ಮ ನಡೆ… ಡ್ರಗ್ಸ್ ಮುಕ್ತ – ನಂದಾವರ ಕಡೆ..” ಅಭಿಯಾನ ಕಾರ್ಯಕ್ರಮ ನಂದಾವರ ಕೇಂದ್ರ ಜುಮಾ ಮಸೀದಿಯ ಸಮುದಾಯ ಭವನದ
ಸಭಾಂಗಣದಲ್ಲಿ ನಡೆಯಿತು.
ಅಭಿಯಾನವನ್ನು ಕರ್ನಾಟಕ ರಾಜ್ಯ ವಕ್ಸ್ ಬೋರ್ಡ್ ನ ಅಧ್ಯಕ್ಷರ ಎನ್.ಕೆ.ಮೊಹಮ್ಮದ್ ಶಾಫಿ ಸಅದಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಾವರ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಜ| ಮಹಮ್ಮದ್ ಶರೀಫ್ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರತಾಪ್ ಸಿಂಗ್ ತೋರಟ್, ಬಂಟ್ವಾಳ ಸರ್ಕಲ್ ಇನ್ಸ್‌ಪೆಕ್ಟರ್ ವಿವೇಕಾನಂದ, ಬಂಟ್ವಾಳ ನಗರ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ, ಬಂಟ್ವಾಳ ನಗರ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಕಲೈಮಾರ್,ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷರು ಅರವಿಂದ ಭಟ್ ಪದ್ಯಾಣ ಭಾಗವಹಿಸಿದ್ದರು.
ನಂದಾವರ ಕೇಂದ್ರ ಜುಮಾ ಮಸೀದಿಯ ಖತೀಬರಾದ ಖಾಸಿಂ ದಾರಿಮಿ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ಯುನಿವೆಫ್ ಕರ್ನಾಟಕ ಅಧ್ಯಕ್ಷರು ಜ.ರಫೀಉದ್ದೀನ್ ಕುದ್ರೋಳಿ, ರಾಜ್ಯ ತರಬೇತುದಾರರು ಜ| ಕೆ.ಎಂ. ಇಕ್ಬಾಲ್ ಬಾಳಿಲ ಭಾಗವಹಿಸಿದ್ದರು.