Wednesday, October 25, 2023

ಬಿಸಿರೋಡಿನಿಂದ ಅಡ್ಡಹೊಳೆವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ವೇಗ ದೊರೆತಿದೆ: ಸಂಸದ ನಳಿನ್ ಕುಮಾರ್ ಕಟೀಲು ಕಾಮಗಾರಿ ನಡೆಯುವ ವೇಳೆ ಅನೇಕರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೂಕ್ತವಾದ ವ್ಯವಸ್ಥೆಗಾಗಿ ಎನ್.ಎಚ್.ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ

Must read

ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ನಡೆಯುತ್ತಿದ್ದು ಬಿಸಿರೋಡಿನಿಂದ ಅಡ್ಡಹೊಳೆವರೆಗಿನ ರಸ್ತೆ ಕಾಮಗಾರಿ ವೇಗ ಪಡೆದುಕೊಂಡಿದೆ , ಎರಡು ಏಜೆನ್ಸಿಗಳು ಕಾಮಗಾರಿಯನ್ನು ನಡೆಸುತ್ತಿದೆ, ಈಗಾಗಲೇ ಅಡ್ಡಹೊಳೆಯಿಂದ ನೆಲ್ಯಾಡಿ, ಹಾಗೂ ಬಿಸಿರೋಡಿನಿಂದ ಮಾಣಿವರೆಗೆ ರಸ್ತೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.

ಅವರು ಹೆದ್ದಾರಿ ಸಮಸ್ಯೆಯ ಬಗ್ಗೆ ಸಾರ್ವಜನಿಕ ರಿಂದ ಅಹವಾಲು ಸ್ವೀಕರ ಮಾಡಿದ ಬಳಿಕ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತವಾದ ಪರಿಹಾರ ಕ್ರಮವನ್ನು ನೀಡುವ ನಿಟ್ಟಿನಲ್ಲಿ ಸೂಚನೆ ನೀಡಿದ ಬಳಿಕ ಮಾಧ್ಯಮ ದವರ ಜೊತೆ ಮಾತನಾಡಿದರು.

ಕಾಮಗಾರಿ ನಡೆಯುವ ವೇಳೆ ತುಂಬಾ ಜನರಿಗೆ ತೊಂದರೆಯಾಗಿದೆ. ಇವರ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಜೊತೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ದು ತುರ್ತ ಪರಿಹಾರಕ್ಕೆ ಎನ್.ಎಚ್. ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ‌.

ಕಲ್ಲಡ್ಕ ಪ್ಲೈ ಓವರ್ ಹಾಗೂ ಮೆಲ್ಕಾರ್ ನ ಅಂಡರ್ ಪಾಸ್ ಗಳಿಂದ ಆಗುವ ಅನೇಕ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ.
ಎಲ್ಲವನ್ನೂ ವ್ಯಾಪ್ತಿಯ ಇತಿಮಿತಿಯೊಳಗೆ ಶೀಘ್ರವಾಗಿ ಪರಿಹಾರ ಮಾಡಲು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ನಡೆಸಲು ತಿಳಿಸಿದ್ದೇನೆ ಎಂದು ಅವರು ಹೇಳಿದರು.
ಕಲ್ಲಡ್ಕದಲ್ಲಿ ಸದ್ಯ ನಡೆಯುವ ಪ್ಲೈ ಓವರ್ ನಿರ್ಮಾಣದ ಕಾಮಗಾರಿ ವೇಳೆ ಸಾರ್ವಜನಿಕರಿಗೆ ಹಾಗೂ ವಾಹನಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ, ಸರ್ವೀಸ್ ರಸ್ತೆಯ ಸಮಸ್ಯೆ ವಿಪರೀತವಾಗಿದ್ದು, ಜಲ್ಲಿ ಕಲ್ಲು ಮಿಶ್ರಿತ ವಾಗಿರುವ ರಸ್ತೆಯಲ್ಲಿ ಬಿಸಿಲಿಗೆ ವಿಪರೀತ ದೂಳು ಉಂಟಾದರೆ , ಮಳೆಗಾಲದಲ್ಲಿ ಕೆಸರು ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಪರಿಹಾರವನ್ನು ಮಾಡಬೇಕು ಎಂದು ಸಂಸದರಲ್ಲಿ ಕಲ್ಲಡ್ಕ ದ ನಿವಾಸಿಗಳು ಮನವಿ ಮಾಡಿದರು.

ಈ ಬಗ್ಗೆ ಸ್ಪಷ್ಟನೆ ನೀಡಿದ ಅಧಿಕಾರಿಗಳು ದೂಳಿನ‌ಸಮಸ್ಯೆ ನಿವಾರಣೆಗಾಗಿ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತದೆ ,ಮಳೆ ಗಾಲ ಮುಗಿಯುವರೆಗೆ ರಸ್ತೆಗೆ ಡಾಮರೀಕರಣ ಅಸಾಧ್ಯವಾಗಿದ್ದು, ಮಲೇ ಕಡಿಮೆಯಾಗುತ್ತಿದ್ದಂತೆ ಡಾಮರು ಹಾಕುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಸಾರ್ವಜನಿಕರ ಸಮಸ್ಯೆ ಬಗ್ಗೆ ಆಲಿಸಿದ ಸಂಸದರು ನಾನು ಅನೇಕ ಬಾರಿ ಬೆಂಗಳೂರಿಗೆ ಹೋಗುವಾಗ ಇವರ ಹೇಳಿರುವ ಸಮಸ್ಯೆಗಳು ಗಮನಕ್ಕೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿಗೆ ಈ ಸಮಸ್ಯೆ ಪರಿಹಾರಕ್ಕೆ ಸೂಕ್ತವಾದ ಕ್ರಮ ಕೈಗೊಳ್ಳವಂತೆ ತಿಳಿಸಿದರು.

ಕಲ್ಲಡ್ಕ ದಿಂದ ಪೂರ್ಲಿಪಾಡಿ ವರೆಗೆ ರಸ್ತೆ ಸಂಪೂರ್ಣವಾಗುವರೆಗೆ ಮತ್ತು ಈ ಸಮಸ್ಯೆ ಇರುವವರೆಗೆ ನಿರಂತರವಾಗಿ ನೀರು ಹಾಕಬೇಕು. ಕಂಪೆನಿ ಮಾಡುವ ಕೆಲಸದ ವರದಿಯನ್ನು ಪ್ರತಿ ದಿನ ಶಾಸಕರಿಗೆ ನೀಡಬೇಕು ಸಾರ್ವಜನಿಕ ರಿಂದ ಯಾವುದೇ ದೂರು ಬರದಂತೆ ಕಾಮಗಾರಿ ನಡೆಸಬೇಕು ಎಂಬ ಸೂಚನೆಗಳನ್ನು ನೀಡಿದರು.

ಇದೇ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಉಳಿಯುವಂತೆ ಗುಣಮಟ್ಟದ ಡಾಮರೀಕರಣ ಮಾಡಿ ಕೊಡಿ ಎಂದು ಸಾರ್ವಜನಿಕರು ಮನವಿ ಮಾಡಿದರು. ಪ್ರಸ್ತುತ ಕಂಪೆನಿ ನೀರು ಹಾಕುವ ಟ್ಯಾಂಕರ್
ಟ್ಯಾಂಕರ್ ಇದೆ ಆದರೆ ಚಾಲಕ ಟ್ಯಾಂಕರ್ ನೊಳಗೆ ನಿದ್ರಿಸುತ್ತಿದ್ದಾರೆ ಆರೋಪ ಮಾಡಿದರು. ಹಾಗಾಗಿ
ನೀರು ಬೇಡವೇ ಬೇಡ ಎಂದು ಪಟ್ಟು ಹಿಡಿದರು. ಸದ್ಯ ಮಳೆ ಬರುತ್ತಿರುವುದರಿಂದ ಡಾಮರೀಕರಣ ಅಸಾಧ್ಯ, ಅದರೂ ಡಾಮರೀಕರಣ ಕಾಮಗಾರಿ ಪ್ರಾರಂಭ ಮಾಡುತ್ತೇವೆ, ಸೆಪ್ಟೆಂಬರ್ ಗೆ ಡಾಮರೀಕರಣ ಮುಗಿಸುತ್ತೇವೆ.ಅಲ್ಲಿ ವರೆಗೆ ನೀರು ಹಾಕಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇವೆ ಎಂಬ ಭರವಸೆ ಕಂಪೆನಿ ನೀಡಿದೆ. ಇದರ ಜೊತೆಗೆ ರಸ್ತೆ ಕಾಮಗಾರಿ ವಹಿಸಿಕೊಂಡಿರುವ ಕಂಪೆನಿಯ ವಾಹನಗಳು ಅತೀ ವೇಗವಾಗಿ ಸಂಚಾರ ಮಾಡುವುದರಿಂದ ಅನೇಕ ಅಪಘಾತಗಳು ನಡೆದಿವೆ ಎಂದು ದೂರನ್ನು ನೀಡಿದರು.

ಓವರ್ ಸ್ಪೀಡ್ ಗೆ ಬ್ರೇಕ್ ಬೀಳಬೇಕು ಮತ್ತು ಕಲ್ಲಡ್ಕದಲ್ಲಿ ಜನರು ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ಪುಟ್ ಪಾತ್ ಮಾಡಿ ಕೊಡಿ
ಅಂಗಡಿ ಗಳಿಗೆ ವ್ಯಾಪಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸಂಸದರು ಅಧಿಕಾರಿಗಳಿಗೆ ಸೂಚನೆನೀಡಿದರು.

ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ , ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ,ಪ್ರಮುಖರಾದ ಸುಲೋಚನ ಜಿ‌ಕೆಭಟ್ ಮತ್ತಿತರರು ಉಪಸ್ಥಿತರಿದ್ದರು.

More articles

Latest article