Wednesday, October 25, 2023

ಎಂಡಿಎಂಎ ಮಾದಕ ವಸ್ತು ಮಾರಾಟಕ್ಕೆ ಯತ್ನ : ಇಬ್ಬರು ಆರೋಪಿಗಳು ಅರೆಸ್ಟ್

Must read

ಉಪ್ಪಿನಂಗಡಿ: ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉಪ್ಪಿನಂಗಡಿ ಗ್ರಾಮದ ಕೂಟೇಲು ಎಂಬಲ್ಲಿ ನಡೆದಿದೆ.

ಬಜತ್ತೂರು ನಿವಾಸಿ ಲತೀಫ್ ಬಿ.ಎ, ಬೆಳ್ತಂಗಡಿ ಕೊಕ್ಕಡ ನಿವಾಸಿ ಬಿ ಜುನೈದ್ ಬಂಧಿತರು.

ಆ.15 ರಂದು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕೂಟೇಲು ಎಂಬಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ವಾಹನ ತಪಾಸಣೆ ಮಾಡಿಕೊಂಡಿರುವಾಗ ಅದೇ ಮಾರ್ಗವಾಗಿ ಬಂದ ಸ್ಕಾರ್ಫಿಯೋ ವಾಹನವನ್ನು ನಿಲ್ಲಿಸಲು ಸೂಚಿಸಿದ್ದು, ಈ ವೇಳೆ ವಾಹನವನ್ನು ನಿಲ್ಲಿಸಿ ವಾಹನದಲ್ಲಿದ್ದ ಇಬ್ಬರು ಪರಾರಿಯಾಗಲು ಯತ್ನಿಸಿದ್ದು, ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಹಿಡಿದು ವಿಚಾರಿಸಿದ್ದಾರೆ.

ಈ ವೇಳೆ ವಾಹನವನ್ನು ಪರಿಶೀಲಿಸಿದಾಗ ಅಂದಾಜು 6,000 ಮೌಲ್ಯದ 3.2 ಮಿಲಿ ಗ್ರಾಂ. ಮಾದಕ ವಸ್ತು ಎಂಡಿಎಂಎ ದೊರಕಿರುತ್ತದೆ.

ಇಬ್ಬರು ಆರೋಪಿಗಳು, ಮಾದಕ ವಸ್ತು ಎಂಡಿಎಂಎ ಹಾಗೂ ಆರೋಪಿಗಳ ಬಳಿಯಿದ್ದ 2 ಮೊಬೈಲ್ ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

More articles

Latest article