Wednesday, October 18, 2023

MDMA ನಿದ್ರಾಜನಕ ಅಮಲು ಪದಾರ್ಥ ಮಾರುಕಟ್ಟೆ ಯತ್ನ : ಓರ್ವನ ಬಂಧನ ಅಮಲು ಪದಾರ್ಥಗಳ ಮಾರಾಟದ ವಿರುದ್ದ ಬೇಟೆಗೆ ಮುಂದಾದ ಪೊಲೀಸರು.

Must read

ಬಂಟ್ವಾಳ: MDMA ನಿದ್ರಾಜನಕ ಪದಾರ್ಥ ಸೇವನೆ ಮಾಡಿದ ವ್ಯಕ್ತಿಯೋರ್ವ ಕಾರಿನಲ್ಲಿ ಮಾರಾಟ ಮಾಡಲು ಹೋಗುತ್ತಿದ್ದ ವೇಳೆ ಬಂಟ್ವಾಳ ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ಪೋಲೀಸ್ ತಂಡ ಆರೋಪಿಯನ್ನು ಬಂಧಿಸಿದೆ.

ಬೋಳಂತೂರು ಗ್ರಾಮದ ಕೋಡಿಕಂಡ ನಿವಾಸಿ ಮೊಹಮ್ಮದ್ ‌ಆಸೀರ್ ಬಂಧಿತ ಆರೋಪಿ.

ಬಂಧಿತನಿಂದ 4 ಗ್ರಾಂ MDMA ನಿದ್ರಾಜಾನಕ ಸೊತ್ತು ಹಾಗೂ ಅಂದಾಜು ಒಂದುವರೆ ಲಕ್ಷಮೌಲ್ಯದ ಅಲ್ಟೋ ಕಾರನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸಂಶಯದ ಮೇಲೆ ಕಾರೊಂದನ್ನು ನಿಲ್ಲಿಸಿ , ತಪಾಸಣೆ ನಡೆಸಿದಾಗ ಈತ ಅಮಲು ಪದಾರ್ಥ ಸೇವನೆ ಮಾಡಿದ ಬಗ್ಗೆ ಅನುಮಾನ ಮೂಡಿದ ಪೋಲೀಸರ ತಂಡ ಹೆಚ್ಚಿನ ತನಿಖೆ ಮಾಡಿದೆ.

ತನಿಖೆಯ ವೇಳೆ ಈತ ಲಾರಿ ಚಾಲಕ ಎಂದು ಗೊತ್ತಾಗಿದ್ದು,ಬೆಂಗಳೂರಿನ ವ್ಯಕ್ತಿಯೋರ್ವನ ಮೂಲಕ MDMA ಪಡೆದುಕೊಂಡು, ಮಂಗಳೂರು ಸುತ್ತ ಮುತ್ತ ಮಾರಟ ಮಾಡಲು ಅಲ್ಟೋ ಕಾರಿನಲ್ಲಿ ತೆರಳುತ್ತಿದ್ದ. ಆದರೆ ಈತನ ನಡವಳಿಕೆ ಮೇಲೆ ಸಂಶಯಗೊಂಡ ಪೊಲೀಸರು ವಾಹನ ತಡೆದು ವಿಚಾರಿಸಿದ್ದಾರೆ ಈ ವೇಳೆ ಆರೋಪಿ ಪೋಲೀಸರ ಬಲೆಗೆ ಬಿದ್ದಿದ್ದಾನೆ.

More articles

Latest article