Wednesday, October 18, 2023

ನುಡಿದಂತೆ ನಡೆದ ಮನೋಜ್ ಕಟ್ಟೆಮಾರ್

Must read

ಮಂತ್ರದೇವತೆ ಕಟ್ಟೆಮಾರ್ ಕ್ಷೇತ್ರದ ಮನೋಜ್ ಕಟ್ಟೆಮಾರ್ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ದತ್ತು ಸಂಸ್ಥೆಯಾದ ಸರಕಾರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದಡ್ಡಲಕಾಡು ಇಲ್ಲಿಗೆ ಆಗಮಿಸಿ ಸಂಸ್ಥೆಯ ಎಲ್ಲಾ ವಿದ್ಯಾರ್ಧಿಗಳಿಗೆ ಸಿಹಿ ತಿಂಡಿ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಹಿಂದೆ ಶಾಲೆಯ ಕಾರ್ಯಕ್ರಮದಲ್ಲಿ ಆಗಮಿಸಿ ಶಾಲೆಗಾಗಿ ಪ್ರತಿವರ್ಷ ಪ್ರೋತ್ಸಾಹ ನೀಡುವ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಭಕ್ತಾದಿಗಳು ನೀಡಿದ ಹಣವನ್ನು ಶಾಲೆಯ ಅಭಿವೃದ್ಧಿಗೆ ನೀಡುದಾಗಿ ತಿಳಿಸಿರುತ್ತಾರೆ. ಅದೇ ಪ್ರಕಾರ ನುಡಿದಂತೆ ನಡೆದ ಮನೋಜ್ ಕಟ್ಟೆಮಾರ್ 2ನೇ ವರ್ಷ ತಮ್ಮ ಕ್ಷೇತ್ರದಲ್ಲಿ ಶಾಲೆಗಾಗಿ ಸಂಗ್ರಹಿಸಿದ ಮೊತ್ತವನ್ನು ಶಾಲೆಗೆ ನೀಡಿದರು.

ಶಾಲೆಯ ನೂತನ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿದರು. ಶಾಲೆಯ ಅಭಿವೃದ್ಧಿ ಹಾಗೂ ಪ್ರಗತಿಯನ್ನು ಗಮನಿಸಿದ ಮನೋಜ್ ಕಟ್ಟೆಮಾರ್ ಸಂಸ್ಥೆಯ ಒರ್ವ ಶಿಕ್ಷಕರ ವೇತನವನ್ನು ನೀಡುವುದಾಗಿ ಘೋಷಿಸಿರುತ್ತಾರೆ.ಈ ಸಂದರ್ಭದಲ್ಲಿ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಅಂಚನ್ ಗೌರವಾನ್ವಿತ ಮನೋಜ್ ಕಟ್ಟೆಮಾರ್ ರವರ ಪ್ರೀತಿ ವಿಶ್ಯಾಸಕ್ಕೆ ಕೃತಜ್ಞತೆ ಸಲ್ಲಿಸಿದರು . ಈ ಸಂದರ್ಭದಲ್ಲಿ SDMC ಅಧ್ಯಕ್ಷರಾದ ಪುರುಷೋತ್ತಮ ಅಂಚನ್, ಟ್ರಸ್ಟಿ ರಾಮಚಂದ್ರ ಕರೆಂಕಿ, ಶಾಲಾ ಮುಖ್ಯ ಶಿಕ್ಷಕರಾದ ರಮಾನಂದ ಉಪಸ್ಥಿತರಿದ್ದರು.

More articles

Latest article