Tuesday, October 17, 2023

ಸ್ವಾತಂತ್ರ್ಯ ದಿನಾಚರಣೆಯಂದು ವೀರ ಸಾವರ್ಕರ್ ಗೆ ಜೈಕಾರ : ಶಾಲಾ ಶಿಕ್ಷಕಿಗೆ ಬೆದರಿಕೆ, ಪೋಲೀಸ್ ಮೆಟ್ಟಿಲು ಏರಿದ ವಿವಾದ

Must read

ದ.ಕ. ಜಿಲ್ಲೆಯ ವಿಟ್ಲದ ಮಂಚಿ ಸರಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೆ ಜೈಕಾರ ಹಾಕಿದ್ದು, ಈ ವೇಳೆ ಕೆರಳಿದ ಸದಸ್ಯ ಶಾಲಾ ಶಿಕ್ಷಕಿಯನ್ನು ಬೆದರಿಸಿ ಕ್ಷಮೆಯಾಚಿಸಿದ ಘಟನೆ ನಡೆದಿದೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಘೋಷ ಹಾಕುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವೀರ ಸಾವರ್ಕರ್ ಗೆ ಜೈ ಘೋಷಣೆ ಹಾಕಿದ್ದು, ಈ ವೇಳೆ ಕೆರಳಿದ SDPI ಸದಸ್ಯ ಬಶೀರ್ ಎಂಬಾತನಿಂದ ಶಾಲೆಯಲ್ಲಿ ರಂಪಾಟ ಮಾಡಿದ್ದಾರೆ. ಮಾತ್ರವಲ್ಲದೇ ವಿದ್ಯಾರ್ಥಿಗಳ ಪರವಾಗಿ ಶಾಲಾ ಶಿಕ್ಷಕಿ ಕ್ಷಮೆ ಕೋರುವಂತೆ ಬೆದರಿಸಿದ ಘಟನೆಯೂ ನಡೆದಿದೆ. ಇನ್ನು ಈತನ ರಂಪಾಟದಿಂದ ಬೆದರಿದ ಶಿಕ್ಷಕಿಯಿಂದ ಕ್ಷಮೆಯಾಚಿಸಿದ್ದಾರೆ.

ಮಂಚಿ ಶಾಲೆಯಲ್ಲಿ ನಡೆದ ಈ ಘಟನೆ ಸ್ವಾತಂತ್ರ್ಯ ಹೋರಾಟಗಾರನಿಗೆ ಮಾಡಿದ ಅವಮಾನವಾಗಿದ್ದು, ಸಧ್ಯ ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಧ್ಯ ಬಶೀರ್ ಎಂಬಾತ ಶಿಕ್ಷಕಿಯಿಂದ ಕ್ಷಮೆ ಕೇಳಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

More articles

Latest article