Wednesday, October 25, 2023

ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ

Must read

ಕಲ್ಲಡ್ಕ: ಕೃಷಿಕರು, ಶಿಕ್ಷಕರು, ಸೈನಿಕರು ದೇಶದ ಬೆನ್ನೆಲುಬು, ಇವರ ಸೇವಾ ಕಾರ್ಯ ದೇಶಸೇವೆಗೆ ಜೀವನ ಮುಡಿಪಾಗಿಟ್ಟಿದ್ದು ಅವರ ಸೇವಾ ಕಾರ್ಯ ಭಾರತದ ಭವಿಷ್ಯದ ರೂವಾರಿ. ಇಂದು ಭಾರತೀಯರಿಗೆ ಜಗತ್ತಿನೆಲ್ಲೆಡೆ ಭಾರತೀಯರಿಗೆ ಮೊದಲ ಪ್ರಾಶಸ್ತ್ಯ ಸಿಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಮಜಿ ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟುರವರು ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿ 77 ನೇ ಸ್ವಾತಂತ್ರ ಕಾರ್ಯಕ್ರಮ ಉದ್ದೇಶಿಸಿ ಮಾತಾಡಿದರು.

ಕಾರ್ಯಕ್ರಮದ ಅಧ್ಯಕ್ಷಥೆಯನ್ನು ಶಾಲಾಭಿರುದ್ದಿ ಸಮಿತಿಯ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್ ವಹಿಸಿದರು.

ನಿರಂತರ ಹೋರಾಟದ ತ್ಯಾಗದ ಫಲದ ಪರಿಣಾಮ ಇಂದು ನಾವು ಸ್ವಾತಂತ್ರ್ಯದ ಅನುಭವ ಪಡೆಯುತ್ತಿದ್ದೇವೆ , ಇಂದು ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶದಿಂದ ಅಭಿವೃದ್ಧಿ ಹೊಂದಿದ ದೇಶ ಎನ್ನಲು ತುಂಬಾ ಸಂತೋಷವಾಗುತ್ತದೆ. ಇಂದು ಪ್ರತಿ ಕ್ಷೇತ್ರದಲ್ಲೂ ಭಾರತವು ಮುಂಚೂಣಿಯಲ್ಲಿ ಇದ್ದು ವಿಶ್ವದಲ್ಲೇ ಮಾನ್ಯತೆ ಪಡೆದಿರುವುದು ಅತೀವ ಸಂತಸದ ವಿಚಾರವಾಗಿದೆ ಎಂದು ಕೆ.ಎಂ.ಎಫ್. ವಿಸ್ತರಣಾಧಿಕಾರಿ ಜಗದೀಶ್ ರವರು ತಿಳಿಸಿದರು.

ಸಭಾ ಕಾರ್ಯಕ್ರಮದ ಮೊದಲು ಧ್ವಜರೋಹಣ ಮಾಡಿ ವೀರಕಂಭ ಪಂಚಾಯತ್ ತನಕ ಮಕ್ಕಳು ವಿವಿಧ ಸ್ವಾತಂತ್ರ ಹೋರಾಟಗಾರ ವೇಷ ಹಾಕಿ ಪ್ರಭಾತವೇರಿ ಮಾಡಲಾಯಿತು.

ಮಕ್ಕಳು ಕನ್ನಡ, ಇಂಗ್ಲಿಷ್, ಹಿಂಧಿ ಭಾಷೆಯಲ್ಲಿ ಸ್ವಾತಂತ್ರದ ಬಗ್ಗೆ ಭಾಷಣ ಹಾಗೂ ದೇಶಪ್ರೇಮ ಗೀತೆ,ಹಾಗೂ ನೃತ್ಯ ಮಾಡಿದರು.

ವೇದಿಕೆಯಲ್ಲಿ ಗ್ರಾಮ ಪಂಚಾತಿನ ಅಧ್ಯಕ್ಷರಾದ ಲಲಿತಾ, ನಿಕಟಪೂರ್ವ ಅಧ್ಯಕ್ಷರಾದ ದಿನೇಶ್, ಸದಸ್ಯರಾದ ಜಯಂತಿ, ಹಿರಿಯರಾದ ತಿಮ್ಮಪ್ಪ ಪೂಜಾರಿ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ,ಮೊದಲದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಊರಿನ ವಿವಿಧ ಸಂಘಟನೆಗಳಾದ ಮಾತೃಶ್ರೀ ಗೆಳೆಯರ ಬಳಗ, ಯುವಶಕ್ತಿ ಫ್ರೆಂಡ್ಸ್, ಕೇಸರಿ ಫ್ರೆಂಡ್ಸ್, ಯುವ ಫ್ರೆಂಡ್ಸ್ ನ ಅಧ್ಯಕ್ಷರು ಹಾಗೂ ಸದಸ್ಯರುಗಳು, ಶಾಲಾಭಿರುದ್ಧಿ ಸಮಿತಿಯ ಸದಸ್ಯರುಗಳು, ಮಕ್ಕಳಪೋಷಕರು ಭಾಗವಹಿಸಿದರು.

ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ. ಸ್ವಾಗತಿಸಿ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ವಂದಿಸಿದರು.ಶಿಕ್ಷಕಿ ಅನುಷಾ ಕಾರ್ಯಕ್ರಮ ನೀರೂಪಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು.

More articles

Latest article