Friday, October 27, 2023

ವೀರಕಂಭ ಗ್ರಾಮದ ಮಜಿ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆ

Must read

ಕಲ್ಲಡ್ಕ: ಆರೋಗ್ಯ ಮತ್ತು ಶಿಕ್ಷಣ ದೇಶದ ಭದ್ರ ಬುನಾದಿಯಾಗಿದೆ ಅದಕ್ಕಾಗಿ ಎಲ್ಲರೂ ಸ್ವಾರ್ಥ ರಹಿತವಾಗಿ ಶ್ರಮಿಸಬೇಕು.ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರಿಗೆ ತನ್ನ ಶಾಲೆಯ ಬಗ್ಗೆ ಒಳ್ಳಯ ಭಾವನೆ, ಸಂಬಂಧ ಇರಬೇಕು ಆಗ ಮಾತ್ರ ಶೈಕ್ಷಣಿಕವಾಗಿ ಹಾಗೂ ಭೌತಿಕ ಅಭಿವೃದ್ಧಿಗೆ ಕಾರಣರಾಗುತ್ತದೆ ಎಂದು ಮಜಿ ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮಾತಾ ಡೆವಲಪರ್ಸ್ ಸುರತ್ಕಲ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ರವರು ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ, ಇಲ್ಲಿ ಶಾಲಾ ಶಿಕ್ಷಕ ರಕ್ಷಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬಳಿಕ ತಮ್ಮ ದತ್ತು ಸಂಸ್ಥೆಯ ಮೂಲಕ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಿದ ಸಮವಸ್ತ್ರ ವನ್ನು ಹಂಚಿದರು.

ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಪೋಷಕರೊಂದಿಗೆ ಮುಕ್ತವಾಗಿ ಚರ್ಚಿಸಿ ಸಲಹೆ ಅಭಿಪ್ರಾಯವನ್ನು ಪಡೆದರು.

ಈ ಸಂದರ್ಭದಲ್ಲಿ ಶಾಲೆಗೆ ಮುಖ್ಯ ಶಿಕ್ಷಕ ಹುದ್ದೆಗೆ ದ.ಕ.ಜಿ.ಪಂ‌.ಹಿ.ಪ್ರಾ.ಶಾಲೆ.ಪಡಿಬಾಗಿಲು ಇಲ್ಲಿಂದ ವಗಾ೯ವಣೆಯ ಮೂಲಕ ಸೇವೆಗೆ ಸೇರಿದ ಶ್ರೀಮತಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ.ಹಾಗೂ ಕುಕ್ಕಾಜೆ ಶಾಲೆಯಿಂದ ವರ್ಗಾವಣೆಗೊಂಡು ಮಜಿ ಶಾಲೆಗೆ ಆಗಮಿಸಿದ ಮಮತಾ ರವರನ್ನು ದತ್ತು ಸಂಸ್ಥೆಯ ಪರವಾಗಿ ಹೂಗುಚ್ಛ ನೀಡಿ ಸ್ವಾಗತಿಸಿದರು.

ಕಲ್ಲಡ್ಕ ಕ್ಲಸ್ಟರ್ನ ಸಿ. ಆರ್.ಪಿ. ಜ್ಯೋತಿ ಶಿಕ್ಷಣ ಇಲಾಖೆಯ ಇಲಾಖೆವಾರು ಮಾಹಿತಿ, ದಾಖಲಾತಿ ಸಂದರ್ಭದಲ್ಲಿ ಆಗುವ ತಪ್ಪು ಹಾಗೂ ಅವುಗಳಿಂದ ಆಗುವ ತೊಂದರೆಗಳ ಬಗ್ಗೆ ತಿಳಿಸಿ ಪೋಷಕರ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್ ಸಿಂಗೇರಿ, ಉಪಾಧ್ಯಕ್ಷ ವಿಜಯ ಶೇಖರ್, ವೀರಕಂಭ ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ ಜನಾರ್ಧನ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ , ಹಿರಿಯ ಶಿಕ್ಷಕಿ ಶಕುಂತಲಾ ಎಂ ಬಿ ವಂದಿಸಿದರು, ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು.

More articles

Latest article