Friday, October 27, 2023

ಮಜಿ ವಿರಕಂಭ ಶಾಲೆಯಲ್ಲಿ ಶಾಲಾ ಮಕ್ಕಳ ಕಣ್ಣಿನ ಪರೀಕ್ಷೆ ಕಾರ್ಯಕ್ರಮ

Must read

ಕಲ್ಲಡ್ಕ: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆರೋಗ್ಯವೂ ಕಾರಣವಾಗಿರುತ್ತದೆ, ಉತ್ತಮ ಆರೋಗ್ಯ ಹೊಂದಿದಾಗ ಕಲಿಕಾ ಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತದೆ, ಕಣ್ಣು ಬಹುಮುಖ್ಯ ವಾದ ಅಂಗವಾಗಿದ್ದು ಅದರ ತೊಂದರೆಗಳನ್ನು ಪ್ರಾರಂಭದ ಹಂತದಲ್ಲಿ ಸರಿಪಡಿಸಿದ ಆಗ ಮಾತ್ರ ವೇಗವಾದ ಪರಿಣಾಮ ಬೀರಲು ಸಾಧ್ಯ, ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಇದನ್ನು ಗುರುತಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಬಂಟ್ವಾಳ ಸಿಟಿ ಹಾಗೂ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಲ್ಲಡ್ಕ/ ಬಾಳ್ತಿಲ ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವಿರಕಂಭ ಇಲ್ಲಿನಡೆದ ಶಾಲಾ ಮಕ್ಕಳ ಕಣ್ಣಿನ ಪರೀಕ್ಷೆ ಕಾಯ೯ಕ್ರಮ ವನ್ನು ಉದ್ದೇಶಿಸಿ ರೋಟರಿ ಕ್ಲಬ್ ಬಂಟ್ವಾಳ ಸಿಟಿ ಇದರ ಅಧ್ಯಕ್ಷ ರಾದ ರೊಟೇರಿಯನ್ ಗಣೇಶ್ ಶೆಟ್ಟಿ ರವರು ಮಾತನಾಡಿದರು.

ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಣ್ಣಿನ ಪರೀಕ್ಷೆಯನ್ನು ವೈದ್ಯಾಧಿಕಾರಿ ಶಾಂತಾರಾಜ್, ವಿವೇಕ್ ರವರು ನಡೆಸಿ ತೊಂದರೆ ಇರುವ ಮಕ್ಕಳ ಬಗ್ಗೆ ಮುಂದಿನ ಪರೀಕ್ಷೆ ಹಾಗೂ ಪರಿಹಾರದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳು ಸರಕಾರದಿಂದ ಮಧ್ಯಾಹ್ನದ ಬಿಸಿ ಊಟಕ್ಕೆ ಸಿಗುವ ಮೊಟ್ಟೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರೋಟರಿ ಕ್ಲಬ್ ವತಿಯಿಂದ ಮೊಟ್ಟೆಯನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು ಹಾಗೂ ಇದರ ಜವಾಬ್ದಾರಿ ಯನ್ನು ರೋಟರಿ ಸದಸ್ಯರಾದ ರೊಟೇರಿಯನ್ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ರೊಟೇರಿಯನ್ ನಿಶಾಂತ್ ರೈ.ಇವರು ವಹಿಸಿಕೊಂಡರು.

ಹಾಗೂ ಕ್ಲಬ್ ನ ವತಿಯಿಂದ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ತರಗತಿಗೆ ಅಗತ್ಯವಿರುವ ಪೀಠೋಪಕರಣ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾದ ಶ್ರೀಯುತ ಕೊರಗಪ್ಪ ನಾಯ್ಕ, ನಿಕಟಪೂರ್ವ ಅಧ್ಯಕ್ಷರಾದ ಸಂಜೀವ ಮೂಲ್ಯ, ವೀರಕಂಬ ಗ್ರಾಮ ಪಂಚಾಯತ್ ಸದಸ್ಯ ಜಯಂತಿ, ರೊಟೇರಿಯನ್ ಸಂದೀಪ್ ಕುಮಾರ್ ಶೆಟ್ಟಿ ಅರೇಬೆಟ್ಟು,ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಎಂ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು, ಶಾಲಾ ಶಿಕ್ಷಕಿಯರು, ಮಕ್ಕಳ ಪೋಷಕರು ಹಾಜರಿದ್ದರು.

ಶಿಕ್ಷಕಿ ಸಂಗೀತ ಶರ್ಮ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೆಸ್ ಮಂಡೋನ್ಸಾ ವಂದಿಸಿದರು.

More articles

Latest article