Wednesday, October 25, 2023

ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥರ ಸಂಘ (ರಿ.) ವತಿಯಿಂದ ವ್ಯಾಪಾರಸ್ಥರಿಗೆ ಐಡಿ ಕಾರ್ಡ್ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Must read

ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥರ ಸಂಘ (ರಿ.) ದ.ಕ ಇದರ ವತಿಯಿಂದ ವ್ಯಾಪಾರಸ್ಥರಿಗೆ ಐಡಿ ಕಾರ್ಡ್ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಿ.ಸಿ.ರೊಡು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು. ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಗೌರವ ಅತಿಥಿಯಾಗಿ ಆಗಮಿಸಿದರು.

ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನಾಯ್ಕ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಜರಂಗದಳ ರಾಜ್ಯ ಸಂಚಾಲಕರು ಶರಣ್ ಪಂಪ್ ವೆಲ್, ಸುಳ್ಯ ಶಾಸಕರು ಭಾಗೀರಥಿ ಮುರುಳ್ಯ, ಮಂಗಳೂರು ವಕೀಲರು ರಂಜಿತ್ ಮೈರಾ ಹಾಗೂ ಬಿಜೆಪಿ ಮುಖಂಡರು ಹರಿಕೃಷ್ಣ ಬಂಟ್ವಾಳ ಭಾಗವಹಿಸಿದ್ದರು.

ಸ್ವಾಗತವನ್ನು ಜಯರಾಮ್ ಎನ್. ಶೆಟ್ಟಿಗಾರ್ ಧನ್ಯವಾದವನ್ನು ಸತೀಶ್ ಬಂಗೇರ ತುಂಬೆ, ನಿರೂಪಣೆ ಚೈತನ್ಯ ಕೂಟಾರಿ ಮಾಡಿದರು

More articles

Latest article