Saturday, October 21, 2023

ವಿಶ್ವ ಪವರ್ ಲಿಫ್ಟಿಂಗ್ ನಲ್ಲಿ ಆದರ್ಶ್ ಗೆ ಚಿನ್ನದ ಪದಕ

Must read

ಮಂಗಳೂರು: ರೊಮೇನಿಯಾದ ಕ್ಲುಜ್ ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್-2023 (equipped) ನ 59 ಕೆ.ಜಿ. ವಿಭಾಗದಲ್ಲಿ ಗುರುವಾರ (ಆಗಸ್ಟ್ 24) ಮಂಗಳೂರಿನ ಆದರ್ಶ್ ಬಿ ಅತ್ತಾವರ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಮಂಗಳೂರು ಅತ್ತಾವರ ನಿವಾಸಿ ಭರತ್ ಕುಮಾರ್ ಹಾಗೂ ಚಂದ್ರಾಕ್ಷಿ ದಂಪತಿ ಪುತ್ರರಾದ ಇವರು ಚೆನ್ನೈ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ(ICF) ನಲ್ಲಿ ಉದ್ಯೋಗಿಯಾಗಿದ್ದಾರೆ.

2021-22ರಲ್ಲಿ ಟರ್ಕಿಯಲ್ಲಿ ನಡೆದ ಏಷಿಯನ್ ಹಾಗೂ ವರ್ಲ್ಡ್‌ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿಯೂ ಚಿನ್ನದ ಪದಕ ಜಯಿಸಿದ್ದರು. ಇವರು ಏಕಲವ್ಯ ಪ್ರಶಸ್ತಿ ಪುರಸ್ಕೃತ ಸತೀಶ್ ಕುಮಾರ್ ಕುದ್ರೋಳಿ ಅವರಿಂದ ಬಾಲಾಂಜನೇಯ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

More articles

Latest article