Monday, October 30, 2023

ಪುತ್ರನ ಸಾವಿನ ಶೋಕದಿಂದ ಸಾವಿಗೆ ಶರಣಾದ ತಂದೆ

Must read

ಕುಂಬಳೆ: ಪುತ್ರನ ಸಾವಿನ ಬಳಿಕ ನೊಂದುಕೊಂಡುದ್ದ ತಂದೆಯೊಬ್ಬರು ಸಾವಿಗೆ ಕೊರಳೊಡ್ಡಿರುವ ಘಟನೆ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ಎಂಬಲ್ಲಿ ವರದಿಯಾಗಿದೆ.

ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ ಮೃತರು.

ಲೋಕೇಶ್ ಅವರ ಪುತ್ರ ರಾಜೇಶ್ ಕಳೆದ ಜುಲೈ ತಿಂಗಳ 10 ರಂದು ನಾಪತ್ತೆಯಾಗಿದ್ದರು. ಬಳಿಕ ಜು.12 ರಂದು ಬೆಳಗ್ಗೆ ರಾಜೇಶ್ ನ ಮೃತದೇಹ ತೊಕ್ಕೊಟ್ಟು ಬಳಿಯ ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು.

ಮಗನ ಸಾವಿನ ಬಳಿಕ ತಂದೆ ಲೋಕೇಶ್ ಮಾನಸಿಕವಾಗಿ, ಕುಗ್ಗಿ ಹೋಗಿದ್ದರು ಎಂದು ಪರಿಸರ ನಿವಾಸಿಗಳು ತಿಳಿಸಿದ್ದಾರೆ. ಬೆಳಗ್ಗೆ ಪರಿಸರದ ಕೆಲವು ಮಂದಿಗೆ ಲೋಕೇಶ್ ರವರು ಮೊಬೈಲ್ನಲ್ಲಿ ವಾಟ್ಸಪ್ ಸಂದೇಶ ಕಳುಹಿಸಿ “ನಾನು ಈಗ ಸೋಮೇಶ್ವರಕ್ಕೆ ಹೋಗಿ ಸಮುದ್ರಕ್ಕೆ ಹಾರುತ್ತೇನೆ. ನನ್ನ ಹೆಣ ಉಳ್ಳಾಲದಲ್ಲಿ ಸಿಗಬಹುದು” ನಾನು ಮೊಬೈಲ್ ಕೊಂಡು ಹೋಗುವುದಿಲ್ಲ ಮನೆಯಲ್ಲಿ ಇಟ್ಟು ಹೋಗ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದರು. ವಾಟ್ಸಪ್ ಸಂದೇಶ ಕೇಳಿದ ಕೂಡಲೇ ಪರಿಸರದವರು ಕಾಲ್ ಕರೆ ಮಾಡಿದಾಗ ಮನೆ ಮಂದಿ ಕಾಲ್ ರಿಸೀವ್ ಮಾಡಿದ್ದರು. ಆಗ ಮನೆ ಮಂದಿ ಲೋಕೇಶ್ ರವರು ಮೊಬೈಲ್ ಮನೆಯಲ್ಲಿ ಇಟ್ಟು ಹೊರ ಹೋದ ಬಗ್ಗೆ ಮಾಹಿತಿ ನೀಡಿದ್ದರು.

ಕೂಡಲೇ ಈ ವಿಷಯವನ್ನು ಉಳ್ಳಾಲ ಠಾಣೆಗೆ ಮನೆಯವರು ಹಾಗೂ ಪರಿಸರ ನಿವಾಸಿಗಳು ತಿಳಿಸಿದ್ದು, ಆದ್ರೆ ಲೋಕೇಶ್ ರ ಮೃತದೇಹ ಉಳ್ಳಾಲದಲ್ಲಿ ಮೀನುಗಾರರಿಗೆ ಸಿಕ್ಕಿದೆ. ಬಳಿಕ ಮೃತದೇಹವನ್ನು ಉಳ್ಳಾಲ ಪೊಲೀಸರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಮರಣೋತ್ತರ ಪರೀಕ್ಷೆ ನಡೆಸಿ, ಮನೆಯವರಿಗೆ ಬಿಟ್ಟು ಕೊಟ್ಟರು.

ಬಳಿಕ ಮನೆಯವರು ಮೃತ ದೇಹವನ್ನು ಲೋಕೇಶ್ ರ ಸಹೋದರ ಸುಧಾಕರರ ಮನೆ ತೊಕ್ಕೊಟ್ ಬಳಿಯ ಮಂಚಿಲ ಎಂಬಲ್ಲಿಗೆ ತಂದು ಅಂತಿಮ ವಿಧಿವಿಧಾನ ನಡೆಸಿ, ಬಳಿಕ ಮೃತದೇಹವನ್ನು ಚೆಂಬುಗುಡ್ಡೆ ಸ್ಮಶಾನದಲ್ಲಿ ಅಪರಾಹ್ನ ಸಂಸ್ಕರಿಸಲಾಯಿತು.

ಲೋಕೇಶ್ ರವರು ಮೂಲತಃ ತೊಕ್ಕೊಟ್ಟು ನಿವಾಸಿಯಾಗಿದ್ದು, ಕಳೆದ 25 ವರ್ಷದಿಂದ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಳದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಪತ್ನಿ ಪ್ರಭಾವತಿ, ಪುತ್ರ ಶುಭಂ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More articles

Latest article