Tuesday, October 24, 2023

ವೀರಕಂಬ ಗ್ರಾಮದ ಕೆಲಿಂಜ ಶಾಲೆಯಲ್ಲಿ ಆಟಿ ಕೂಟ ಕಾರ್ಯಕ್ರಮ

Must read

ಬಂಟ್ವಾಳ: ವೀರಕಂಬ ಗ್ರಾಮದ ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆ ಕೆಲಿಂಜದಲ್ಲಿ ಆಟಿ ಕೂಟ ಕಾರ್ಯಕ್ರಮವು ನಡೆಯಿತು.

ಶಿಕ್ಷಕಿಯರಾದ ಉಷಾ ಸುವರ್ಣ ಮತ್ತು ರೋಶನಿ ಪೌಷ್ಟಿಕಾಂಶ ದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಎಲ್ಲಾ ತಿನಿಸುಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಬಳಿಕ ಸೇರಿರುವ ಎಲ್ಲರಿಗೂ ಸಹಭೋಜನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷೆ ಜಯಂತಿ , ಹಳೆ ವಿದ್ಯಾರ್ಥಿಗಳಾದ ಹಮೀದ್ ಗುಳಿಗದ್ದೆ, ಮೋಹಿತ್ ಶೆಟ್ಟಿ ಕೆಲಿಂಜ, ದೇವಪ್ಪ ಗೌಡ ಕೆಲಿಂಜ, ಜನಾರ್ದನ, ಹಿರಿಯ ಪೋಷಕಿ ಶಶಿಕಲಾ ಕಲ್ಮಲೆ , ಅಂಗನವಾಡಿ ಶಿಕ್ಷಕಿ ರೇವತಿ, ಪ್ರಭಾರ ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ ಉಪಸ್ಥಿತರಿದ್ದರು.

ಶಿಕ್ಷಕಿ ಅಶ್ವಿತ ಸ್ವಾಗತಿಸಿದರು, ಶಿಕ್ಷಕಿ ಪ್ರಣೀತಾ ವಂದಿಸಿದರು. ಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

More articles

Latest article