Wednesday, October 18, 2023

ಕಲ್ಲಡ್ಕ: ಇದು ದೂಳಿನ ಸಂತೆ, ನೀರು ಹಾಕದೆ ಜನರಿಗೆ ಉಚಿತವಾಗಿ ರೋಗ ನೀಡುವ ಕಂಪೆನಿ ವಿರುದ್ದ ಸಾರ್ವಜನಿಕರ ಆಕ್ರೋಶ

Must read

ಬಂಟ್ವಾಳ: ವಾಹನ ಸಂಚಾರಕ್ಕೆ ಕಾಣದಷ್ಟು ರಸ್ತೆಯಲ್ಲಿ ದಟ್ಟ ದೂಳು.ಇದು ಎಲ್ಲಿಯದು ಅಂದುಕೊಂಡಿರಾ..ಇದು ನಮ್ಮ ಕಲ್ಲಡ್ಕದ ಚಿತ್ರಣ.

ಅಗಸ್ಟ್ 20 ರಂದು ಆದಿತ್ಯವಾರ ಮಧ್ಯಾಹ್ನದ ಬಳಿಕ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕದ ದೃಶ್ಯ.

ಮಳೆಗೆ ರಸ್ತೆಯಿಲ್ಲ ಕೆಸರು ಗದ್ದೆಯಾಗಿದೆ, ಮಳೆ ನಿಂತರೆ ದೂಳು ಡ್ರೈವಿಂಗ್ ಮಾಡ ದಷ್ಟು ಕೆಟ್ಟದಾಗಿದೆ,ಅನಾರೋಗ್ಯದ ಬಾಗಿಲು ಬಡಿದಿದೆ,ದೂಳಿನಿಂದ ಕೆಮ್ಮು ದಮ್ಮು ವ್ಯಾಧಿ ಬಾಧೆ ಶುರುವಾಗಿದೆ ರಸ್ತೆಯನ್ನು ಸರಿ ಮಾಡಿ ಕೊಡಿ ಎಂದು ಕಲ್ಲಡ್ಕದ ಸಾರ್ವಜನಿಕರು ಸಂಸದರಲ್ಲಿ ಮನವಿ ಮಾಡಿದಾಗ ಮರುದಿನದಿಂದಲೇ‌ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಹೆದ್ದಾರಿ ಇಲಾಖೆಗೆ ಸೂಚನೆ ನೀಡಲಾಗಿತ್ತು.

ಇದು ಸಂಸದ ನಳಿನ್ ಕುಮಾರ್ ಕಟೀಲು ಅವರು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಜೊತೆ ಸಭೆ ನಡೆಸಿ ಸೂಚನೆ ನೀಡಿದ ಬಳಿಕದ ದೃಶ್ಯ…

ಅಂದರೆ ಇಲಾಖೆ ಮತ್ತು ಗುತ್ತಿಗೆದಾರರಿಗೆ ಸಂಸದರ ಮಾತಿನ ಬಿಸಿ ತಟ್ಟಿಲ್ಲ ಎಂದರ್ಥ.

ಇವರ ಮಾತಿಗೆ ಕಿಮ್ಮತ್ತು ಬೆಲೆ ನೀಡಿಲ್ಲ ಎಂಬುದು ಸಾಬೀತಾಗಿದೆ. ಗುತ್ತಿಗೆದಾರರು ಮಾಡಿದ್ದೇ ಕೆಲಸ ಹೇಳಿದ್ದೇ ಮಾತು..ಹೀಗಾಯಿತಲ್ಲ ಇವರ ವರ್ತನೆ…

ಕಲ್ಲಡ್ಕದಲ್ಲಿ ಪ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಸಂಚಾರಕ್ಕೆ ಬದಲಿ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಿಕೊಡಲಾಗಿತ್ತು.ಆದರೆ ಈ ಸರ್ವೀಸ್ ರಸ್ತೆಯನ್ನು ಕನಿಷ್ಠ ಇವರ ಕಾಮಗಾರಿ ಮುಗಿಯುವರೆಗೆ ಅಂದರೆ ಹೆಚ್ಚು ಕಮ್ಮಿ‌ಮೂರು ವರ್ಷಗಳ ಅವಧಿಗೆ ಉತ್ತಮ ಗುಣಮಟ್ಟದ ಡಾಮರೀಕರಣ ಮಾಡಿಕೊಟ್ಟಿದ್ದರೆ ಈ ಅವ್ಯವಸ್ಥೆಗೆ ಅವಕಾಶವಾಗುತ್ತಿರಲಿಲ್ಲ. ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಮಣ್ಣಿನ ರಸ್ತೆ ನಿರ್ಮಾಣ ಮಾಡಿ ಅದಕ್ಕೆ ಜಲ್ಲಿ ಹುಡಿಮಿಶ್ರಿತವಾದ ಕಚ್ಚಾ ವಸ್ತಗಳನ್ನು ಹಾಕಲಾಗುತ್ತದೆ.ಇದರಿಂದ ಮಳೆಗಾಲಕ್ಕೆ ಹೊಂಡಗುಂಡಿಗಳಿಂದ ರಸ್ತೆ ಸಂಚಾರಕ್ಕೆ ತೊಂದರೆಯಾದರೆ,ಮಳೆ ಕಡಿಮೆಯಾಗುತ್ತಲೆ ದೂಳಿನಿಂದ ಕಣ್ಣು ಬಿಡಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗುತ್ತದೆ.

ಒಂದು ರೀತಿಯಲ್ಲಿ ಜನರ ಜೀವನಕ್ಕೆ,ಮತ್ತು ಸಂಚಾರಕ್ಕೆ ವಿರುದ್ದವಾದ ರೀತಿಯಲ್ಲಿ ಕಂಪೆನಿ ಕೆಲಸ ಮಾಡುತ್ತಿದೆ ಎಂಬ‌ಆರೋಪಗಳು ಕೇಳಿ ಬರುತ್ತಿದೆ.

ಸಾರ್ವಜನಿಕರಿಗೆ ಕಳೆದ ಎರಡು ವರ್ಷಗಳಿಂದ ಗರಿಷ್ಟ ಮಟ್ಟದ ತೊಂದರೆ ನೀಡುತ್ತಾ ವಾಹನಗಳು ಗುಜರಿಯಾಗುವಂತೆ ಮಾಡಿದ ಆರೋಪ ಕಂಪೆನಿ ಮೇಲಿದೆ.

ಕಾಮಗಾರಿ ಪೂರ್ತಿಯಾಗುವರೆಗೆ ನೀರು: ಸಂಸದ ನಳಿನ್ ಕುಮಾರ್ ಸೂಚನೆ

ಕಲ್ಲಡ್ಕದ ಸಾರ್ವಜನಿಕರ ದೂರಿನಂತೆ ಇಲ್ಲಿನ ವ್ಯವಸ್ಥೆಯನ್ನು ನಾನು ಬೆಂಗಳೂರಿಗೆ ಹೋಗುವ ವೇಳೆ ಕಂಡಿದ್ದೇನೆ ಎಂದ ಸಂಸದ ನಳಿನ್ ಅವರು ಕಂಪೆನಿ ವಿರುದ್ದ ಗರಂ ಆಗಿದ್ದರು.

ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ವಿರುದ್ದ ಗರಂ ಆಗಿದ್ದ ಕಟೀಲು ಅವರು ಮುಂದಿನ ದಿನಗಳಲ್ಲಿ ಅಂದರೆ ಕಾಮಗಾರಿ ಮುಗಿಯುವ ವರೆಗೆ ಸಾರ್ವಜನಿಕ ವಲಯದಿಂದ ಯಾವುದೇ ದೂರುಗಳು ಬರದ ರೀತಿಯಲ್ಲಿ ಕಾಮಗಾರಿಯನ್ನು ನಡೆಸಬೇಕು ಎಂಬ ಸೂಚನೆಯನ್ನು ನೀಡಿದ್ದರು.

ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹೆಚ್ಚು ಜವಬ್ದಾರಿ ಯಿಂದ ಕೆಲಸ ನಿರ್ವಹಣೆ ಮಾಡಬೇಕು ಎಂದು ‌ತಿಳಿಸಿದ್ದರು.

ಅಲ್ಲದೆ ಕಾಮಗಾರಿ ಮುಗಿಯುವ ವರೆಗೆ ಕಲ್ಕಡ್ಕ ಕೆ.ಸಿ.ರೋಡಿನಿಂದ ಅಗತ್ಯ ವಿರುವ ವರೆಗೆ ದೂಳು ಎದ್ದೇಳದಂತೆ ನಿರಂತರವಾಗಿ ನೀರು ಹಾಯಿಸುತ್ತಿರಬೇಕು. ಎಂದು ಸೂಚನೆ ನೀಡಲಾಗಿತ್ತು.

ಸಂಸದರ ಹೇಳಿದ ಮಾತು ಹೇಳಿ ಹೋದ ಮೇಲೆ ಅವರ ಹಿಂದೆಯೆ ಎದ್ದು ಹೋಗಿದೆ ಎಂದು ಕಲ್ಲಡ್ಕ ದ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ಅವರ ಹೇಳಿದಕ್ಕೆ ಕನಿಷ್ಠ ಒಂದು ದಿನವಾದರೂ ಇವರು ನೀರು ಹಾಕಿದ್ದರೆ ಸಾರ್ಥಕ ವಾಗುತ್ತಿತ್ತು ಎಂದು ಕಂಪೆನಿ ವಿರುದ್ದ ಆರೋಪ ಮಾಡಿದ್ದಾರೆ.

More articles

Latest article