Wednesday, October 18, 2023

100 ನೇ ಯಶಸ್ವಿ ಸಭಾ ನಿರ್ವಹಣ (MC) ಕಾರ್ಯಕ್ರಮಕ್ಕಾಗಿ ರಾಜೇಶ್ ಕೊಟ್ಟಾರಿ ಕೊಳಕೀರು, ಕಲ್ಲಡ್ಕ ಇವರಿಗೆ ಅಭಿನಂದನೆ

Must read

ಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ವತಿಯಿಂದ 100 ನೇ ಯಶಸ್ವಿ ಸಭಾ ನಿರ್ವಹಣ (MC} ಕಾರ್ಯಕ್ರಮಕ್ಕಾಗಿ ರಾಜೇಶ್ ಕೊಟ್ಟಾರಿ ಕೊಳಕೀರು, ಕಲ್ಲಡ್ಕಇವರನ್ನು ಯೋಜನೆಯ ವಲಯ ಕಚೇರಿ ಕಲ್ಲಡ್ಕ ಇಲ್ಲಿ ನಡೆದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆಯಲ್ಲಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಯೋಜನೆಯ ಕಲ್ಲಡ್ಕ ವಲಯದ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ಜನಜಾಗೃತಿ ವೇದಿಕೆ ಸದಸ್ಯ ವೆಂಕಟ್ರಾಯ ಪ್ರಭು, ಒಕ್ಕೂಟಗಳ ಅಧ್ಯಕ್ಷರುಗಳಾದ ದಯಾನಂದ, ಸೀತಾರಾಮ್ ಶೆಟ್ಟಿ, ಹರೀಶ್ ಸಫಲ್ಯ, ಮಮತಾ ಶೆಟ್ಟಿ,ಶಾಂಭವಿ ಆಚಾರ್ಯ,ಮಮತಾ,,ಸೇವಾ ಪ್ರತಿನಿಧಿ ಗಣೇಶ್, ಶೌರ್ಯ ತಂಡದ ಸಂಯೋಜಕಿ ವಿದ್ಯಾ, ಶೌರ್ಯ ತಂಡದ ಸದಸ್ಯರುಗಳು ಉಪಸ್ಥಿತರಿದ್ದರು.

 

More articles

Latest article