Friday, October 27, 2023

ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ (ನಿ‌.) 2022-23 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ

Must read

ಬಂಟ್ವಾಳ: ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ನಿ‌. ಇದರ 2022-23 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಕಲ್ಲಡ್ಕ ಶ್ರೀರಾಮ ಮಂದಿರದ ಮಾದವ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಾಲಿನ ಮಾರುಕಟ್ಟೆ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಬೆಳವಣಿಗೆಗಳು ಇತ್ತೀಚಿನ ದಿನಗಳಲ್ಲಿ ಕಂಡುಬಂದಿದ್ದು,ರೈತರು ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಬೇಕು. ಹಾಲಿನ ಗುಣಮಟ್ಟವನ್ನು ಕಾಯ್ದುಕೊಂಡು ಸಂಘದ ಪ್ರಗತಿಗೆ ಪೂರಕವಾಗಿ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

ಕಲ್ಲಡ್ಕ ಹಾಲು ಉತ್ಪಾದಕರ ಸಂಘವು ಯಶಸ್ವಿ 37 ವರ್ಷಗಳನ್ನು ಪೂರೈಸಲು ಸದಸ್ಯರ ಸಹಕಾರದಿಂದ ಮಾತ್ರ ಸಾಧ್ಯವಾಯಿತು. ಗೋಳ್ತಮಜಲು, ಬಾಳ್ತಿಲ,,ಅಮ್ಟೂರು, ಬೋಳಂತೂರು, ವೀರಕಂಭ ಗ್ರಾ ಮ ವ್ಯಾಪ್ತಿಯ ಬಾಯಿಲ, ಪಾಣೆಮಂಗಳೂರು ಗ್ರಾಮದ ಬೊಂಡಾಲ ಒಳಪಟ್ಟು ರೈತ ಸದಸ್ಯರ ಸಹಕಾರದಿಂದ ಪ್ರಗತಿಪಥದಿಂದ ಮುನ್ನಡೆಯುತ್ತಿದೆ.

ಸಂಘ ಪ್ರಸ್ತುತ 225 ಸದಸ್ಯರಿಂದ 4500 ಷೇರು ಮೊತ್ತವನ್ನು ಹೊಂದಿದ್ದು ಪ್ರತಿ ವರ್ಷ ಬೋನಸ್ ಹಾಗೂ ಡಿವಿಡೆಂಡ್ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

‌ಸಂಘವು ಈ ಸಾಲಿನಲ್ಲಿ ರೂ.1.98 ಕೋಟಿ ವಾರ್ಷಿಕ ವಹಿವಾಟು ಮಾಡಿದ್ದು, 58.63 ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು,5,90,333.01ಚರಾಸ್ತಿ, ಸುಮಾರು 17,33,752.70 ಸ್ಥಿರಾಸ್ತಿ ಹೊಂದಿದ್ದು, ದ.ಕ.ಹಾಲು ಒಕ್ಕೂಟ ಇದರಲ್ಲಿ 9,08,000.00 ಪಾಲು ಬಂಡವಾಳವನ್ನು ಹೊಂದಿದೆ ಎಂದು ತಿಳಿಸಿದರು.

ಪ್ರಸ್ತುತ ಸಾಲಿನಲ್ಲಿ ಸಂಘ ವು 7,54,052.20 ನಿವ್ವಳ ಲಾಭ ಹೊಂದಿದೆ ಎಂದು ಅವರು ತಿಳಿಸಿದರು.

ಸಂಘದ ಸದಸ್ಯರ ಹಟ್ಟಿ ಪಾಕೃತಿಕ ವಿಕೋಪದಿಂದ ಹಾನಿಗೊಂಡಲ್ಲಿ ಸಂಘದ ವತಿಯಿಂದ ಪರಿಹಾರ ನೀಡುವ ಕಾರ್ಯ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಸಂಘದ ಉಪಾಧ್ಯಕ್ಷ ರತ್ನಾಕರ ಪ್ರಭು, ನಿರ್ದೇಶಕರುಗಳಾದ ರತ್ನಾಕರ ಭಂಡಾರಿ, ಸಂಕಪ್ಪ ಕೊಟ್ಟಾರಿ, ಶ್ರೀಧರ್ ಶೆಟ್ಟಿ, ಶಿವಾನಂದ ಪೂಜಾರಿ, ಶಾಂತಪ್ಪ ಮೂಲ್ಯ, ಕೊರಗಪ್ಪ ಬಂಗೇರ, ಜಯರಾಮ ಕೊಟ್ಟಾರಿ, ಗೋಪಾಲ ನಾಯ್ಕ್, ಪುಷ್ಪರಾಜ, ಧನವತಿ, ಸೌಮ್ಯ ವಿಸ್ತರಣಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.

ಎಸ್. ಎಸ್.ಎಲ್‌.ಸಿ.ಹಾಗೂ ಪಿಯುಸಿ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಗೌರವ ಧನ ನೀಡಿ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಕೆ.ಸ್ವಾಗತಿಸಿ,ವಾರ್ಷಿಕ ವರದಿ ವಾಚಿಸಿದರು.

More articles

Latest article