Tuesday, October 17, 2023

ಕಲ್ಲಡ್ಕ ರೈತರ ಸೇವಾ ಸೇವಾ ಸಹಕಾರಿ ಸಂಘ ನಿ.ಕಲ್ಲಡ್ಕ ಇದರ ವಾರ್ಷಿಕ ಮಹಾಸಭೆ

Must read

ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸೇವಾ ಸಹಕಾರಿ ಸಂಘ ನಿ.ಕಲ್ಲಡ್ಕ ಇದರ ವಾರ್ಷಿಕ ಮಹಾಸಭೆ ಬ್ಯಾಂಕಿನ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಅವರ ಅಧ್ಯಕ್ಷತೆಯಲ್ಲಿ ಕಲ್ಲಡ್ಕ ಶ್ರೀರಾಮ ಮಂದಿರದ ಮಾದವ ಸಭಾ ಭವನದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ‌ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಮಾತನಾಡಿ ಸಂಘವು 2022-23 ನೇ ಸಾಲಿನ ಆರ್ಥಿಕ ವರ್ಷದಲ್ಲಿ 375.58 ಕೋಟಿ ವ್ಯವಹಾರ ನಡೆಸಿ ರೂ.1.28,68,779.97 ಕೋಟಿ ಲಾಭ ಗಳಿಸಿರುತ್ತದೆ. ಈ ಆರ್ಥಿಕ ವರ್ಷದಲ್ಲಿ 1427 ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ. 17.54 ಕೋಟಿ ಸಾಲ 133 ಸದಸ್ಯರಿಗೆ ಶೇ.3 ಪರ್ಸೆಂಟ್ ಬಡ್ಡಿಯಲ್ಲಿ ಕೃಷಿ ಅಭಿವೃದ್ಧಿ ಗಾಗಿ ರೂ.4.21 ಕೋಟಿ ಮದ್ಯಮಾವಧಿ ಸಾಲ, 2 ಸದಸ್ಯರಿಗೆ ರೂ.1.45 ಲಕ್ಷ ವಾಹನ ಖರೀದಿ ಸಾಲ,36 ಸದಸ್ಯರಿಗೆ ಹಸುಘಟಕ ನಿರ್ವಹಣೆಗಾಗಿ ಶೂನ್ಯ ಬಡ್ಡಿ ದರದಲ್ಲಿ ರೂ.17.42 ಲಕ್ಷ ಪಶುಭಾಗ್ಯ ಸಾಲ, 8 ಸದಸ್ಯರಿಗೆ ರೂ.74 ಲಕ್ಷ ಗೃಹನಿರ್ಮಾಣ ಸಾಲ ವಿತರಿಸಿದ್ದೇವೆ ಎಂದು ಅವರು ತಿಳಿಸಿದರು.

ಸಂಘದ ವ್ಯವಹಾರ ಕಾರ್ಯಯೋಜನೆಯ ಅನುಷ್ಠಾನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದ್ದಕ್ಕಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಳೆದ 2015 ರಿಂದ ಸತತವಾಗಿ 8 ವರ್ಷಗಳಲ್ಲಿ ಉತ್ತಮ ಸಹಕಾರ ಸಂಘವೆಂದು ಗುರುತಿಸಿ ಸನ್ಮಾನ ,ಪ್ರಶಸ್ತಿ ಪತ್ರ ಮತ್ತು ಫಲಕ ನೀಡಿ ಗೌರವಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಕಲ್ಲಡ್ಕ ರೈತರ ಸಹಕಾರ ಸಂಘ 2014 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಐದು ಗ್ರಾಮಗಳ ಕಾರ್ಯವ್ಯಾಪ್ತಿಗೊಳಪಟ್ಟ ರೈತ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಒಂಬತ್ತು ವರ್ಷಗಳ ಸೇವೆ ನೀಡಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ.

ಸಹಕಾರ ತತ್ವದ ಅಡಿಯಲ್ಲಿ ಜನರ ಸೇವೆ ಮಾಡುವ ಸಹಕಾರಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಎಲ್ಲರ ಸಹಕಾರ ನಿರಂತರವಾಗಿ ಮುಂದುವರಿಯಲಿ ಎಂದು ಅವರು ಮನವಿ ಮಾಡಿದರು.

‌‌ ವೇದಿಕೆಯಲ್ಲಿ ಉಪಾಧ್ಯಕ್ಷ ಬಿ.ಸುಧಾಕರ ರೈ, ನಿರ್ದೇಶಕರುಗಳಾದ ಗಿರಿಯಪ್ಪ ಗೌಡ, ಲೋಕಾನಂದ, ಪೂವಪ್ಪ ಗೌಡ,ವೆಂಕಟರಾಯ ಪ್ರಭು, ಕೊರಗಪ್ಪ ನಾಯ್ಕ,ಚಂದ್ರಶೇಖರ ಟೈಲರ್, ಸುರೇಶ್ ಶೆಟ್ಟಿ, ಮಹಾಬಲ ಸಾಲ್ಯಾನ್, ನೋಣಯ್ಯ ಎಂ‌ಆರ್, ಅರುಣಾ ವಿ.ಭಟ್, ವಿಜಯಪ್ರಕಾಶ ಉಪಸ್ಥಿತರಿದ್ದರು.

ಎಸ್.ಎಸ್.ಎಲ್.ಸಿ.ಹಾಗೂ ಪಿಯುಸಿ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಂಘದ ಸದಸ್ಯರ‌ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ‌ಕೆ ಸಂಘದ ವಾರ್ಷಿಕ ವರದಿ ವಾಚಿಸಿದರು.

ಶಾಖಾ ವ್ಯವಸ್ಥಾಪಕ ಗೋಪಾಲ ಕೆ.ಲೆಕ್ಕಪತ್ರ ಮಂಡಿಸಿದರು.

38 ವರ್ಷಗಳ ಕಾಲ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೇಶವ ಅವರಿಗೆ ದಂಪತಿ ಸಹಿತ ಸನ್ಮಾನ ಮಾಡಲಾಯಿತು.

ಉಪಾಧ್ಯಕ್ಷ ಸುಧಾಕರ ರೈ ಸ್ವಾಗತಿಸಿದರು. ನಿರ್ದೇಶಕಿ ಅರುಣ್ ವಿ.ಭಟ್ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

More articles

Latest article