ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃ ಶಕ್ತಿ, ದುರ್ಗಾ ವಾಹಿನಿ, ಕಲ್ಲಡ್ಕ ಪ್ರಖಂಡ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ಮತ್ತು ಸಾರ್ವಜನಿಕ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಂಜಿನ ಮೆರವಣಿಗೆಯನ್ನು ಮಾನ್ಯ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಉದ್ಘಾಟಿಸಿದರು.
ಸಭಾ ಅಧ್ಯಕ್ಷತೆಯನ್ನು ಉದ್ಯಮಿ ಸಂದೇಶ್ ಶೆಟ್ಟಿ ಅಲಂಕರಿಸಿದ್ದು ದಿಕ್ಸೂಚಿ ಭಾಷಣಗೈದ ಕು. ಹಾರಿಕಾ ಮಂಜುನಾಥ್ ಹಿಂದೂಗಳು ಬೌದ್ಧಿಕ ಸಮರಕ್ಕೆ ತಯಾರಾಗಿರ ಬೇಕು ಎಂದು ಕರೆ ನೀಡಿದರು. ಪುತ್ತೂರು ಜಿಲ್ಲಾ ಬಜರಂಗದಳ ಸಂಯೋಜಕರಾದ ಭರತ್ ಕುಮ್ಡೇಲ್ ಗೌರವ ಉಪಸ್ಥಿತಿಯಲ್ಲಿದ್ದರು.
ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಕ ಕೃಷ್ಣಪ್ಪ, ಕಲ್ಲಡ್ಕ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಸಚಿನ್ ಮೆಲ್ಕಾರ್, ಕಲ್ಲಡ್ಕ ಬಜರಂಗದಳ ಸಂಚಾಲಕರಾದ ಸಂಪತ್ ಕಡೇಶಿವಾಲಯ ಮತ್ತು ಸಭೆಯಲ್ಲಿ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.