Thursday, October 26, 2023

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಬಂಟ್ವಾಳ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕಲ್ಲಡ್ಕ ವಲಯದ ವತಿಯಿಂದ ದುಶ್ಚಟ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ ಮನವಿ ಪತ್ರ ವಿತರಣೆ

Must read

ಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಬಂಟ್ವಾಳ ತಾಲೂಕು, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬಂಟ್ವಾಳ ಇದರ ಕಲ್ಲಡ್ಕ ವಲಯದ ವತಿಯಿಂದ ದುಶ್ಚಟಮುಕ್ತ ಸಮಾಜ ನಿರ್ಮಾಣದ ಪರಿಕಲ್ಪನೆಯಲ್ಲಿ ಜನಜಾಗೃತಿಯ ಮುಖೇನ ಸಮಾಜದಲ್ಲಿ ದುರ್ಬಲ ವರ್ಗದಲ್ಲಿ ದುಶ್ಚಟಗಳಿಂದ ಉಂಟಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಲು ಮದುವೆ, ಮದಿರಂಗಿ,ನಿಶ್ಚಿತಾರ್ಥ, ಹುಟ್ಟುಹಬ್ಬ ಮುಂತಾದ ಶುಭ ಕಾರ್ಯಕ್ರಮಗಳಲ್ಲಿ ಸಂಪ್ರದಾಯಗಳು ಕಟ್ಟುಪಾಡುಗಳನ್ನು ಮೀರಿ ಕೇವಲ ಮಧ್ಯಪಾನ ಧೂಮಪಾನ ಇತ್ಯಾದಿ ಕೆಟ್ಟ ಚಟುವಟಿಕೆಗಳಿಗೆ ಆಸ್ಪದ ನೀಡಿ ಕಾರ್ಯಕ್ರಮಗಳನ್ನು ಸಂಘಟಿಸು ಇರುವುದನ್ನು ತಡೆಗಟ್ಟಲು ಶುಭ ಕಾರ್ಯಕ್ರಮಗಳು ದಿನ ನಿಗದಿಯಾದ ಮನೆಗಳಿಗೆ ಯೋಜನೆಯ ಪದಾಧಿಕಾರಿಗಳು ಸದಸ್ಯರುಗಳು ಭೇಟಿ ನೀಡಿ ದುಶ್ಚಟ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ ಮನವೊಲಿಸಿ ಮನವಿ ಪತ್ರವನ್ನು ನೀಡುವ ಕಾರ್ಯಕ್ರಮ ಮಾಡಲಾಯಿತು.

ಅದರಂತೆ ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ನಂದನತಿಮಾರು ಐತಪ್ಪ ಗೌಡ, ಹಾಗೂ ಪದ್ಮನಾಭ ಬಂಗೇರ ಮಜಿ ಇವರ ಮನೆಗೆ ಭೇಟಿ ನೀಡಿ, ಮನೆಯವರಿಗೆ ಮನವರಿಕೆ ಮಾಡಿ ಮನವಿ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಶೆಟ್ಟಿ, ಜನಜಾಗ್ರತಿ ವೇದಿಕೆ ಕಲ್ಲಡ್ಕ ವಲಯ ಯಧ್ಯಕ್ಷ ಭಟ್ಯಪ್ಪ ಶೆಟ್ಟಿ, ಸದಸ್ಯರಾದ ವೀರಪ್ಪ ಮೂಲ್ಯ ಬೆತ್ತಸರವು , ಸೇವಾ ಪ್ರತಿನಿಧಿಗಳಾದ ವಿಜಯ ಶೇಖರ್, ಲೀಲಾವತಿ ಉಪಸ್ಥಿತರಿದ್ದರು.

More articles

Latest article