Tuesday, October 17, 2023

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ರೆ ಗಲ್ಲು ಶಿಕ್ಷೆ, ಕಠಿಣ ಕಾನೂನು ಮಸೂದೆ ಮಂಡಿಸಿದ ಅಮಿತ್ ಶಾ

Must read

ನವದೆಹಲಿ: ಅಧಿವೇಶನದ ಕೊನೆಯ ದಿನ ಕೇಂದ್ರ ಸರ್ಕಾರ ಐತಿಹಾಸಿಕ ಮಸೂದೆಗಳನ್ನು ಮಂಡಿಸಿದೆ.

ಬ್ರಿಟೀಷರ ಕಾಲದಲ್ಲಿ ರಚಿಸಲಾದ ಕಾನೂನುಗಳನ್ನು ಸಮಗ್ರವಾಗಿ ಪರಿಶೀಲಿಸಿ, ಸದ್ಯ ಭಾರತದ ಪರಿಸ್ಥಿತಿ ಹಾಗೂ ಭಾರತೀಯ ನಾಗರೀಕರ ರಕ್ಷಣೆಗಾಗಿ ಪರಿಷ್ಕೃತ ಬಿಲ್ ಮಂಡಿಸಲಾಗಿದೆ. ಮುಂಗಾರು ಅಧಿವೇಶನದ ಕೊನೆಯ ದಿನ ಅಮಿತ್ ಶಾ ಮಹತ್ವದ ಮಸೂದೆ ಮಂಡಿಸಿದ್ದಾರೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ರೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಗ್ಯಾಂಗ್​ರೇಪ್​ ಎಸಗಿದ್ರೆ ಜೀವಾವಧಿ ಶಿಕ್ಷೆ ಅಥವಾ 20 ವರ್ಷ ಶಿಕ್ಷೆ ವಿಧಿಸಲಾಗುತ್ತೆ. ಗುಂಪುಗೂಡಿ ಹತ್ಯೆ ಮಾಡಿದ್ರೆ ಕನಿಷ್ಠ 7 ವರ್ಷ ಜೈಲು ವಿಧಿಸಲಾಗುತ್ತೆ. ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡಿದರೆ ಶಿಕ್ಷೆ ವಿಧಿಸಲಾಗುತ್ತೆ.

ಇದರ ಜೊತೆಗೆ ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಮೂರು ಕಾಯ್ದೆಗಳ ಹೆಸರು ಬದಲಾಗಿವೆ ಎನ್ನಲಾಗಿದೆ. ಲೋಕಸಭೆಯಲ್ಲಿ ಮಸೂದೆಗೆ ಅಂಗಿಕಾರ ದೊರೆತಿದೆ. ರಾಜ್ಯಸಭೆಯಲ್ಲಿ ಈ ಮಸೂದೆಗೆ ಅಂಕೀತ ಬಿದ್ರೆ ಮೂರು ಕಾನೂನುಗಳ ಹೆಸರು ಬದಲಾಗಲಿವೆ.

ಈಗಾಗಲೇ ಇರುವ ಐಪಿಸಿ ಅಂದ್ರೆ ಇಂಡಿಯನ್ ಪೀನಲ್ ಕೋರ್ಡ್ ಮುಂದೆ ಭಾರತೀಯ ನ್ಯಾಯ ಸಂಹಿತ, ಸಿಆರ್​ಪಿಸಿ ಅಂದ್ರೆ ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್ ಮುಂದೆ ಭಾರತೀಯ ನಾಗರಿಕ ಸುರಕ್ಷಾ, ಮತ್ತು ಈಗ ಇರುವ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್​ ಭಾರತೀಯ ಸಾಕ್ಷ್ಯ ಹೆಸರಿನಲ್ಲಿ ಬದಲಾಗಲಿವೆ.

 

More articles

Latest article