Friday, October 27, 2023

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 77ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆ

Must read

77ನೇ ವರ್ಷದ ಸ್ವಾತಂತ್ರೋತ್ಸವದ ಕಾರ್ಯಕ್ರಮವು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಮಾಜಿ ಸಚಿವ ಬಿ. ರಮಾನಾಥ ರೈಯವರು ಧ್ವಜಾರೋಹಣ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, 76 ವರ್ಷಗಳ ಹಿಂದೆ ನಮ್ಮ ದೇಶಕ್ಕೆ ಶಾಂತಿಯಿಂದ ಸ್ವಾತಂತ್ರ್ಯವನ್ನು ತಂದುಕೊಡಲು ಶ್ರಮಿಸಿದ ಅನೇಕ ಮಹನೀಯರನ್ನು ನೆನೆಪಿಸಿದರು. ಅವರು ಹೋರಾಟದ ಫಲವಾಗಿ ಈಗಿನ ಭಾರತ ಬಲಿಷ್ಟವಾಗಿದ್ದು ಎಲ್ಲಾ ಭಾಷೆ ಜಾತಿ-ಧರ್ಮದ ಜನರು
ಒಗ್ಗಟ್ಟಾಗುವಂತಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಪದ್ಮಶೇಖರ್ ಜೈನ್, ಅಕ್ರಮ
ಸಕ್ರಮ ಸಮಿತಿಯ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್, ಪುರಸಭಾ ಸದಸ್ಯರಾದ ಜನಾರ್ಧನ ಚೆಂಡ್ತಿಮಾರ್, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್À ಅಲಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಮಹಾಬಲ ಬಂಗೇರ, ವಿಶ್ವನಾಥ ಮಣಿ, ಸೇವಾದಳದ ಮುಖ್ಯಸ್ಥರಾದ ವೆಂಕಪ್ಪ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಸದಸ್ಯರಾದ ಚಂದ್ರಶೇಖರ ಆಚಾರ್ಯ, ಮುಖಂಡರಾದ ಪ್ರವೀಣ್
ರೊಡ್ರಿಗಸ್ ಹಂಚಿಕಟ್ಟೆ, ಅಮ್ಮು ಅರ್ಬಿಗುಡ್ಡೆ, ರಾಜೀವ್ ಕಕ್ಕೆಪದವು, ರಾಮಣ್ಣ ಪೂಜಾರಿ, ಪ್ರಕಾಶ್ ಅರ್ಬಿಗುಡ್ಡೆ, ಸೋಮಪ್ಪ ಪೂಜಾರಿ, ಬಶೀರ್ ಕೆಳಗಿನ ಪೇಟೆ, ದಿವಾಕರ ಚೆಂಡ್ತಿಮಾರ್, ಚಿಕ್ಕ ಅಬಿಗುಡ್ಡೆ, ರಿಯಾಝ್ ಹುಸೇನ್, ಪದ್ಮನಾಭ ಮಡಿವಾಳ, ಸುಲೈಮಾನ್ ಬಡ್ಡಕಟ್ಟೆ, ರಿಯಾಝ್ ಕೆಳಗಿನ ಪೇಟೆ, ನವಾಜ್ ಕೆಳಗಿನ ಪೇಟೆ, ಸನಾವುಲ್ಲ ಜಿ.ಎಚ್, ವಲಾರ್ ಬಡ್ಡಕಟ್ಟೆ, ಸಾಧಿನ್ ಜಿ.ಎಚ್, ಪದ್ಮನಾಭ ಸಾವಂತ್, ನಾಸೀರ್ ಕೆಳಗಿನ ಪೇಟೆ, ಖಲೀಲ್ ಕೆಳಗಿನ ಪೇಟೆ, ಆಶ್ರೀತ್ ಬಂಗೇರ, ಇರ್ಷಾದ್ ಕೆಳಗಿನ ಪೇಟೆ ಉಪಸ್ಥಿತರಿದ್ದರು.

 

More articles

Latest article