Friday, October 27, 2023

ಹಿಂದೂ ಜಾಗರಣಾ ವೇದಿಕೆ ವತಿಯಿಂದ ಬಿಸಿರೋಡಿನಲ್ಲಿ ಬೃಹತ್ ಪಂಜಿನ ಮೆರವಣಿಗೆ

Must read

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ತಾಲೂಕು ಘಟಕ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ದ ಅಂಗವಾಗಿ ಬಿಸಿರೋಡಿನಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.


ಕೈಕಂಬ ಪೊಳಲಿ ದ್ವಾರದಿಂದ ಆರಂಭವಾದ ಪಂಜಿನ ಮೆರವಣಿಗೆಗೆ ಬಂಟ್ವಾಳ ಶಾಸಕ‌ರಾಜೇಶ್ ನಾಯ್ಕ್ ಅವರು ಚಾಲನೆ ನೀಡಿದರು.
ಅಲ್ಲಿಂದ ಹೊರಟ ಮೆರವಣಿಗೆ ರಾಜ ಮಾರ್ಗವಾಗಿ ಸ್ಪರ್ಶಾ ಕಲಾಮಂದಿರದವರೆಗೆ ನಡೆಯಿತು.
ಬಳಿಕ ನಡೆದ ಸಭೆಯನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರಿನ ಪರ್ತಕರ್ತೆ ಶ್ರೀಲಕ್ಮೀ, ಹಿಂದೂ ಸಮಾಜ ಜಾಗೃತರಾಗಬೇಕಿದೆ, ಅಂದರೆ ಅಂತರಿಕವಾದ ವೈಮನಸ್ಸುಗಳನ್ನು ದೂರಮಾಡಿಕೊಂಡು ಸಶಕ್ತ ಭಾರತ ನಿರ್ಮಾಣದ ಗುರಿ ನಮ್ಮದಾಗಿರಬೇಕಾಗಿದೆ ಎಂದರು.
ಅಖಂಡ ಭಾರತ ನಿರ್ಮಾಣದ ಕನಸು ಅಥವಾ ಸಂಕಲ್ಪ ಮಾತಿನಿಂದ ,ಭಾವನೆಯಿಂದ ಸಾಧ್ಯವಿಲ್ಲ. ಅಥವಾ ಕೇವಲ ಸಂಕಲ್ಪವಾಗಿ ಉಳಿಸುವ ನಿಟ್ಟಿನಲ್ಲಿ ಹೋರಾಟ ಸಲ್ಲದು ಬದಲಾಗಿ ಅಖಂಡ ಭಾರತ ಕಾರ್ಯರೂಪಕ್ಕೆ ತರಲು ಹಿಂದೂ ಸಮಾಜದ ಜವಾಬ್ದಾರಿಯನ್ನು ಅರಿತುಕೊಂಡು ಮುನ್ನಡೆಯಬೇಕಿದೆ ಎಂದು ಅವರು ಯುವಕರಿಗೆ ಮನದಟ್ಟು ಮಾಡಿದರು.
ನಾವು ಎಲ್ಲೊ ಒಂದು ಕಡೆ ನಮ್ಮೋಳಗಿನ ಗುರುವನ್ನು ಮರೆತಿದ್ದೇವೆ, ಲೌಕಿಕ ಜಗತ್ತಿನ‌ ಗುರುವನ್ನು ಮರೆತಿದ್ದೇವೆ, ಒಳಗಿನ ಗುರುವನ್ನು ಸಾಕ್ಷ್ಯಾತ್ಕಾರಗೊಳಿಸಿದಾಗ ಭಾರತ ವಿಶ್ವಗುರುವಾಗಲು ಸಾಧ್ಯವಾಗುತ್ತದೆ, ಸುಮ್ಮನೆ ಬಡಕೊಂಡರೆ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಕೇಸರಿ ಎಂಬ ಪರಿಕಲ್ಪನೆಗೆ ವಿಶೇಷವಾದ ಮತ್ತು ಮಹತ್ತರವಾದ ಸ್ಥಾನವಿದೆ.ಕೇಸರಿ ಎಂದರೆ ಅಗ್ನಿವೀರರು ಅಂತಹ ಅಗ್ನಿವೀರರ ನಾಡಿನಲ್ಲಿ ಸುಸಂಸ್ಕ್ರತ ವೈಭವದ ಭಾರತವನ್ನು ಕಟ್ಟುವ ಕೆಲಸ ನಮ್ಮಿಂದಾಗಬೇಕಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ್ಯ ಅರಳ, ಸುದರ್ಶನ ಬಜ, ರಾಮ್ ದಾಸ ಬಂಟ್ವಾಳ, ಹರಿಕೃಷ್ಣ ಬಂಟ್ವಾಳ,
ಜಿಲ್ಲಾ ಸಂಯೋಜಕ ನರಸಿಂಹ ಮಾಣಿ,ತಾಲೂಕು ಸಂಯೋಜಕ ಹರೀಶ್ ಅಜೆಕಲ, ಹಿಂದೂ ಮುಖಂಡ ರವಿರಾಜ್ ಬಿಸಿರೋಡು, ವಕೀಲರಾದ ದಯಾನಂದ ರೈ, ಹಿಂಜಾವೇ ಪ್ರಾಂತ ಸದಸ್ಯರಾದ ಜಗದೀಶ್ ನೆತ್ತರಕೆರೆ , ಮಂಗಳೂರು ಗ್ರಾಮಾಂತರ ಮತ್ತು ಮಹಾನಗರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕೆಂಪಗುಡ್ಡೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಬಾಲಕೃಷ್ಣ ಕಲಾಯಿ, ಯೋಗೀಶ್ ಕಡೆಗೊಳಿ, ರವಿ ಕೆಂಪುಗುಡ್ಡೆ, ತಿರುಲೆಸ್ ಬೆಳ್ಳೂರು, ಉಪಸ್ಥಿತರಿದ್ದರು.

More articles

Latest article