Friday, October 27, 2023

ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕದ ಪಾಂಚಜನ್ಯ ಹಿರಿಯ ವಿದ್ಯಾರ್ಥಿ ಸಂಘ (ರಿ) ವತಿಯಿಂದ ಹಿರಿಯ ವಿದ್ಯಾರ್ಥಿಗಳಿಗೆ ಕೆಸರು ಗದ್ದೆ ಕ್ರೀಡಾಕೂಟ

Must read

ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇದರ ಪಾಂಚಜನ್ಯ ಹಿರಿಯ ವಿದ್ಯಾರ್ಥಿ ಸಂಘ (ರಿ) ವತಿಯಿಂದ ಹಿರಿಯ ವಿದ್ಯಾರ್ಥಿಗಳಿಗೆ ಕೆಸರು ಗದ್ದೆ ಕ್ರೀಡಾಕೂಟ ದಂಡೆ ಮಾರ್ ಗದ್ದೆಯಲ್ಲಿ ನಡೆಯಿತು.

ಗದ್ದೆಗೆ ಹಾಲು ಎರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶ್ರೀರಾಮ ವಿದ್ಯಾಸಂಸ್ಥೆ ಸಂಸ್ಥಾಪಕರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾl. ಪ್ರಭಾಕರ್ ಭಟ್ ಕಲ್ಲಡ್ಕ ಮಣ್ಣಿನೊಂದಿಗಿನ ಒಡನಾಟ ಅದು ತಾಯಿ ಮಗನ ಸಂಬಂಧದ ಹಾಗೆ. ಮಣ್ಣನ್ನು ಪ್ರೀತಿಸಿದವರು ಜಗತ್ತನ್ನು ನೋಡುವ ದೃಷ್ಟಕೋನವೆ ವಿಶಿಷ್ಟವಾದುದು. ಸರ್ವರಿಗೂ ಒಳಿತನ್ನು ಬಯಸುವ ವಿಶಾಲ ಮನೋಭಾವ ಈ ಮಣ್ಣಿನೊಂದಿಗೆ ಮಿಳಿತವಾಗಿದೆ ಎಂದರು .

ಅಂತಹ ಆಟದೊಂದಿಗೆ ನಮ್ಮ ಧ್ಯೇಯ ಸಂಪನ್ನಗೊಳ್ಳಲಿ ಎಂದು ಹಾರೈಸಿದರು.

ಪದವಿ ವಿಭಾಗದ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರಕಟ್ಟೆ, ಪಾಂಚಜನ್ಯ ಹಿರಿಯ ವಿದ್ಯಾರ್ಥಿ ಸಂಘದ ಸಂಯೋಜಕ ಯತಿರಾಜ್ ಪಿ.,ಸಂಘದ ಅಧ್ಯಕ್ಷ ರಾಜೇಶ್ ನರಿಂಗಾನ,ಕಾರ್ಯದರ್ಶಿ ಶಿವಪ್ರಸಾದ್ ಸುದೇಕಾರ್ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿನಿ ಅನ್ವಿತಾ ಸ್ವಾಗತಿಸಿ, ಉದಯ್ ಸಾಲಿಯಾನ್, ತೀರ್ಥೆಶ್ ಕೆ ನಿರೂಪಿಸಿದರು. ಅನುಷಾ ಕಲ್ಲಡ್ಕ ವಂದಿಸಿದರು.

More articles

Latest article