Friday, October 27, 2023

ಹಿಂ.ಜಾ.ವೇ. ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೊಜಕ್ ಸತೀಶ್ ದಾವಣಗೆರೆ ಮನೆಗೆ ಮಧ್ಯ ರಾತ್ರಿ ನುಗ್ಗಿ ಬಂಧಿಸಿದ ಪೋಲೀಸ್ ಇಲಾಖೆಯ ನಡೆಯನ್ನು ಖಂಡಿಸಿ ಪ್ರತಿಭಟನೆ

Must read

ಹಿಂದು ಜಾಗರಣ ವೇದಿಕೆ ಮಂಗಳೂರು ಜಿಲ್ಲೆ ವತಿಯಿಂದ ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣದ ಬಳಿ ಕಾಂಗ್ರೆಸ್ ಪ್ರೇರಿತ ಅಧಿಕಾರಿಗಳಿಂದ ಗೌರಿಬಿದನೂರಿನಲ್ಲಿ ಅಖಂಡ ಸಂಕಲ್ಪ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯತೆಯ ಭಾಷಣ ಮಾಡಿದ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೊಜಕ್ ಸತೀಶ್ ದಾವಣಗೆರೆ ಇವರನ್ನು ಮಧ್ಯ ರಾತ್ರಿ ಮನೆಗೆ ನುಗ್ಗಿ ಬಂಧಿಸಿದ ಪೋಲೀಸ್ ಇಲಾಖೆಯ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಯಿತು.

ಈ ಸಂಧರ್ಭದಲ್ಲಿ ಹಿಂ.ಜಾ‌ ವೇ‌ ಜಿಲ್ಲಾ ಸಂಯೋಜಕರಾದ ನರಸಿಂಹ ಮಾಣಿ ಮತ್ತು ರಾಮದಾಸ್ ಬಂಟ್ವಾಳ ಮಾತನಾಡಿದರು, ಹಾಗೂ ಪ್ರಮುಖರಾದ ರವಿರಾಜ್ ಬಿಸಿರೋಡ, ರತ್ನಾಕರ ಶೆಟ್ಟಿ, ಮಂಗಳೂರು ಮಹಾನಗರ ಜಿಲ್ಲಾ ಮತ್ತು ಗ್ರಾಮಾಂತರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ, ಜಿಲ್ಲಾ ಪ್ರಮುಖರಾದ ಸಮಿತ್ ರಾಜ್ ದರೆಗುದ್ದೆ, ಪ್ರಕಾಶ್ ಕುಂಪಲ, ಅರುಣ್ ಸಜೀಪ, ಗಣೇಶ್ ಕೆದಿಲ, ಬಾಲಕೃಷ್ಣ ಕಲಾಯಿ, ರವಿ ಕೆಂಪು ಗುಡ್ಡೆ ತಾಲೂಕು ಕಾರ್ಯಕರ್ತರು ಮತ್ತು ಪರಿವಾರದ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.

More articles

Latest article