Tuesday, October 17, 2023

ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಸಮಿತಿ ಪುನರ್ ರಚನೆ ಸಭೆ

Must read

ಬಂಟ್ವಾಳ : ಬಂಟ್ವಾಳ ಬ್ಲಾಕ್‌ಯುವ ಕಾಂಗ್ರೆಸ್ ವತಿಯಿಂದ ಬಡಗ ಕಜೆಕಾರು ಮತ್ತು ತೆಂಕ ಕಜೆಕಾರು ಗ್ರಾಮಗಳ ವಲಯ ಸಮಿತಿ ಸಹಕಾರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಸಮಿತಿ ಪುನರ್ ರಚನೆಯ ಸಭೆ ಪಾಂಡವರಕಲ್ಲು ಸಮುದಾಯ ಭವನದಲ್ಲಿ ನಡೆಯಿತು.

ಮಾಜಿ ಸಚಿವ ಬಿ. ರಮಾನಾಥ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,

ಭವಿಷ್ಯದ ಭಾರತದ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಮಹತ್ವದ್ದಾಗಿದೆ. ಯುವಕರು ದೇಶದ ಬಗ್ಗೆ ಚಿಂತನೆ ಬೆಳೆಸಿ ಎಲ್ಲ ಜಾತಿ,ಧರ್ಮದವರು ಸಾಮರಸ್ಯದ ಬದುಕು ನಡೆಸುವ ಸುಂದರ ಭಾರತದ ನಿರ್ಮಾಣಕ್ಕೆ ಶಕ್ತಿ ತುಂಬಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಬಡಜನತೆಯ ಪರವಾದ ಪಕ್ಷವಾಗಿದ್ದು, ಎಲ್ಲರ ಶ್ರೇಯೋಭಿವೃದ್ಧಿ ಬಯಸುವ ಏಕೈಕ ಪಕ್ಷವಾಗಿದೆ. ಪ್ರಸಕ್ತ ದಿನಗಳಲ್ಲಿ ದೇಶದಲ್ಲಿ ಬದಲಾವಣೆ ಅಗತ್ಯವಾಗಿದೆ.ಅನ್ನ ಭಾಗ್ಯದಂತಹ ಬಡವರ ಸವಲತ್ತುಗಳನ್ನು ವಿರೋಽಸುವವರನ್ನು ವಿರೋಽಸಬೇಕು ಎಂದರು.

ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಅವರು ಮಾತನಾಡಿ,ದ್ವೇಷದಿಂದ ಸುಳ್ಳಿನ ಮೂಲಕ ಅಪಪ್ರಚಾರ ಮಾಡಿ ರಮಾನಾಥ ರೈ ಅವರನ್ನು ಸೋಲಿಸಲಾಗಿದೆ. ಮುಂದಿನ ಚುನಾವಣೆಗಳಲ್ಲಿ ಇಂತಹ ಸುಳ್ಳಿನ ವಿರುದ್ಧ ಒಂದಾಗಿ ಹೋರಾಡಲಿದ್ದೇವೆ ಎಂದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ, ಮನೆ ತಲುಪಿಸುವಲ್ಲಿ ಕಾರ್ಯಕರ್ತರು ಶ್ರಮಿಸಿಬೇಕು ಎಂದರು. ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ್ ಜೈನ್, ಬಂವಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರಾ, ಪ್ರಮುಖರಾದ ಕೆ. ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಸತೀಶ್ಚಂದ್ರ ಕೆ.ಎ.ಹೊಸಮನೆ, ಜಯ ಬಂಗೇರ, ರಕ್ಷಿತಾ, ಮೋಹಿನಿ, ಜೋನ್ ಸಿಕ್ಷೇರಾ, ವಾಸು ಪೂಜಾರಿ ಮಿತ್ತೋಟು, ಪುತ್ತುಮೋನು, ಬಿ.ಆರ್.ಅಂಚನ್, ರಾಮಚಂದ್ರ ಕಂರ್ಬಡ್ಕ, ವಿಟ್ಠಲ ಪೂಜಾರಿ, ಅಬೂಬಕ್ಕರ್, ಲತೀಫ್ ಪಾಂಡವರಕಲ್ಲು, ಯಾಕೂಬ್, ಅಬ್ದುಲ್ ಸಮದ್, ವಲಯ ಸಮಿತಿ ನೂತನ ಅಧ್ಯಕ್ಷ ಅನ್ವರ್ ಸಾದಿಕ್, ಉಪಾಧ್ಯಕ್ಷ ಸಿದ್ದಿಕ್ ಕುತ್ತಾಡಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ, ಕಾರ್ಯಕ್ರಮ ಸಂಘಟಕ ಸುಧಾಕರ್ ಶೆಣೈ ಖಂಡಿಗ ಅವರ ನೇತೃತ್ವದಲ್ಲಿ ರಮಾನಾಥ ರೈ ಅವರನ್ನು ಸಮ್ಮಾನಿಸಲಾಯಿತು.ವಲಯ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಬಂಟ್ವಾಳ ಯುವ ಕಾಂಗ್ರೆಸ್ ಪದಾಧಿಕಾರಿ ನಿಶ್ಚಿತ್ ಆರ್.ಶೆಟ್ಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

More articles

Latest article