Sunday, October 22, 2023

ಮಹಿಳೆಯರಿಗೆ ಗುಡ್​ನ್ಯೂಸ್ ​​; ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಲು ಬಂತು ಸುಲಭ ವಿಧಾನ…ಹೇಗೆ?

Must read

ಬೆಂಗಳೂರು: ಕಾಂಗ್ರೆಸ್​​ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ವಾಟ್ಸಾಪ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ರಶ್ ಹೆಚ್ಚಿದೆ. ಈ ದಟ್ಟಣೆ ಕಡಿಮೆ ಮಾಡಲು ಇದೇ ಮೊದಲ ಬಾರಿಗೆ ಹೊಸ ಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ. ಇ-ಆಡಳಿತಕ್ಕಾಗಿ ಕೇಂದ್ರವು ಅಭಿವೃದ್ಧಿಪಡಿಸಿದ ವಾಟ್ಸಾಪ್​ ಚಾಟ್‌ಬಾಟ್ ಸಹಾಯದಿಂದ ಜನರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಹೇಗೆ..?

ವಾಟ್ಸಾಪ್ ನಂಬರ್ 8147500500ಗೆ ನಿಮ್ಮ ವಿವರ ಕಳಿಸಬೇಕು. ಚಾಟ್‌ಬಾಟ್ ಅರ್ಜಿ‌ ಸಲ್ಲಿಕೆ‌ ಪೂರ್ಣಗೊಳಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇ-ಆಡಳಿತಕ್ಕಾಗಿ ಅಭಿವೃದ್ಧಿಪಡಿಸಿದ ಚಾಟ್‌ಬಾಟ್ ಅರ್ಜಿ ಸಲ್ಲಿಸುವವರ ಜೊತೆ ಸಂವಹನ ನಡೆಸುತ್ತದೆ. ಎಲ್ಲಾ ದಾಖಲೆ ಸಿದ್ಧಪಡಿಸಿ ಇಟ್ಟುಕೊಂಡಿದ್ದರೆ, ಮೂರೇ ನಿಮಿಷದಲ್ಲಿ ಅರ್ಜಿ ಸಲ್ಲಿಸಬಹುದು. ಚಾಟ್‌ಬಾಟ್ ಪಡೆದ ಎಲ್ಲಾ ಮಾಹಿತಿಯನ್ನ ಅಥವಾ ಅರ್ಜಿಯನ್ನ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕಚೇರಿಗಳಿಗೆ ವರ್ಗಾಯಿಸುತ್ತದೆ. ಅಲ್ಲಿ ದಾಖಲೆಗಳ ಪರಿಶೀಲಿಸಿದ ನಂತರ ಅರ್ಜಿ ಸ್ವೀಕಾರ ಮಾಡಲಾಗುತ್ತೆ.

More articles

Latest article