Tuesday, October 31, 2023

ಕಾಂಗ್ರೆಸ್ ಸರ್ಕಾರದ ಮಹತ್ವದ ‘ಗೃಹಜ್ಯೋತಿ’ ಯೋಜನೆಯ ಲಾಭ ಪಡೆದವರೆಷ್ಟು, ವಂಚಿತರಾದವರೆಷ್ಟು? ಇಲ್ಲಿದೆ ಮಾಹಿತಿ

Must read

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರವು ತನ್ನ ಮಹತ್ವದ ಗೃಹಜ್ಯೋತಿ ಯೋಜನೆ ಜಾರಿ ಮಾಡಿ ಒಂದು ತಿಂಗಳಾಗಿದೆ. ಲಕ್ಷಾಂತರ ಗ್ರಾಹಕರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹಾಗಿದ್ದರೆ, ಈ ಯೋಜನೆಯ ಲಾಭ ಪಡೆದವರೆಷ್ಟು..? ವಂಚಿತರಾದ ನೋಂದಾಯಿತ ಜನರೆಷ್ಟು…? ಇಲ್ಲಿದೆ ಮಾಹಿತಿ

ಗೃಹಜ್ಯೋತಿ ಯೋಜನೆಗೆ 1,40,31,320 ಗ್ರಾಹಕರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 74,08,769 ಮಂದಿಗೆ ಶೂನ್ಯ ಬಿಲ್ ನೀಡಲಾಗಿದೆ. ಆದರೆ, 45,29,633 ಜನರು ಸರಾಸರಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದ್ದಾರೆ. ಸುಮಾರು 21 ಲಕ್ಷ ಜನರು 200 ಯೂನಿಟ್​ಗಿಂತ ಹೆಚ್ಚು ಬಳಕೆ ಮಾಡಿ ಗೃಹ ಜ್ಯೋತಿ ಯೋಜನೆಯಿಂದ ವಂಚಿತರಾಗಿದ್ದಾರೆ.

ರಾಜ್ಯ ಸರ್ಕಾರವು 1 ಕೋಟಿ 19 ಲಕ್ಷ ಜನರಿಗೆ ಗೃಹಜ್ಯೋತಿ ಬಿಲ್ ನೀಡಿದ್ದು, ಇದರಲ್ಲಿ ಶೇ.62.06 ರಷ್ಟು ಅಂದರೆ, 74 ಲಕ್ಷದ 8 ಸಾವಿರ ಜನರು ಸರ್ಕಾರ ನೀಡಿರುವ ಸರಾಸರಿ ಹಾಗೂ ಅದಕ್ಕಿಂತ ಕಡಿಮೆ ಯೂನಿಟ್ ಬಳಸಿದ್ದಾರೆ.

ಇನ್ನು, ಈಗಾಗಲೇ ಜುಲೈ ತಿಂಗಳ‌ ಶೂನ್ಯ ಬಿಲ್​​ಗಾಗಿ ಸರ್ಕಾರದಿಂದ ಎಲ್ಲಾ ಎಸ್ಕಾಂಗಳಿಗಾಗಿ ಒಟ್ಟು 650 ಕೋಟಿ ರೂ. ಹಣ ಬಿಡುಗಡೆಯಾಗಿದೆ.

 

More articles

Latest article