Wednesday, October 18, 2023

ಸಂಚಾರಿ ನಿಯಮ ಉಲ್ಲಂಘನೆ : 298 ಡಿಎಲ್‌ ಅಮಾನತು ಶಿಫಾರಸು

Must read

ಮಂಗಳೂರು: ಭಾರತೀಯ ದಂಡ ಸಂಹಿತೆ 1860 ಹಾಗೂ ಭಾರತೀಯ ಮೋಟಾರು ವಾಹನ ಕಾಯಿದೆ-1988 /2019ರ ಅಡಿ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿ ಲ್ಲಿ ಆ. 6ರಿಂದ 20ರ ವರೆಗೆ ಸಂಚಾರ ನಿಯಮ ಉಲ್ಲಂಘಿಸಿದ 298 ವಾಹನ ಸವಾರ/ಚಾಲಕರ ಡಿಎಲ್‌ ಅಮಾನತುಪಡಿಸುವ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಮಿತ ವೇಗ ಮತ್ತು ನಿರ್ಲಕ್ಷ್ಯದ 71, ಮದ್ಯಪಾನಗೈದ 20, ಗೂಡ್ಸ್ ವಾಹನಗಳಲ್ಲಿ ಜನರ ಸಾಗಾಟ 42, ವಾಹನ ಸಂಚಾರ/ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿರುವ 4, ಕೆಂಪು ದೀಪ ಉಲ್ಲಂಘಿಸಿದ 10, ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್‌ನ 7, ಹೆಲ್ಮೆಟ್ ಧರಿಸದ 128, ಸೀಟ್ ಬೆಲ್ಟ್ ಹಾಕದ 16 ಪ್ರಕರಣ ಹೀಗೆ ಒಟ್ಟು 298 ಪ್ರಕರಣಗಳಿಗೆ ಸಂಬಂಧಿಸಿದಂತೆ ಡಿಎಲ್ ಅಮಾನತಿಗೆ ಶಿಫಾರಸು ಮಾಡಲಾಗಿದೆ.

15 ದಿನಗಳಲ್ಲಿ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವತಿಯಿಂದ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಪಾರ್ಕಿಂಗ್‌ ನಿಯಮ ಉಲ್ಲಂಘನೆಗಾಗಿ 593, ಕರ್ಕಶ ಹಾರನ್‌ ಬಳಸಿರುವುದಕ್ಕೆ 106, ಟಿಂಟ್‌ ಗ್ಲಾಸ್‌ ಬಳಕೆಗೆ 70, ಆಟೋರಿಕ್ಷಾಗಳಲ್ಲಿ ಅಧಿಕ ದರ ವಸೂಲಿಗೆ 13, ಏಕಮುಖ ಸಂಚಾರ ಮಾಡಿದ 28 ಹಾಗೂ ಹೆಚ್ಚು ಬಾಡಿಗೆ ಅಥವಾ ಸೂಚಿತ ಸ್ಥಳಕ್ಕೆ ಬರಲೊಪ್ಪದ 13 ರಿಕ್ಷಾ ಚಾಲಕರ ವಿರುದ್ಧ ಸಹಿತ 810 ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಜರುಗಿಸಲಾಗಿದೆ.

More articles

Latest article