Thursday, October 26, 2023

ಸಂಚಾರಿ ನಿಯಮ ಉಲ್ಲಂಘನೆ : 170 ಮಂದಿಯ ಡಿಎಲ್ ರದ್ದು

Must read

ಮಂಗಳೂರು: ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ 170 ಮಂದಿಯ ಡಿಎಲ್ ನ್ನು ಆರ್ ಟಿ ಒ ಅಧಿಕಾರಿಗಳು ರದ್ದುಗೊಳಿಸಿದ್ದಾರೆ.

ವಿವಿಧ ರೀತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚಾಲಕರ ಡಿಎಲ್ ರದ್ದು ಪಡಿಸಲಾಗಿದೆ. 24 ಅಪಘಾತ ಪ್ರಕರಣಗಳು, 12 ಅತಿಯಾದ ವೇಗ, 11 ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ವಿಚಾರ, 95 ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ, 13 ಸೀಟ್ ಬೆಲ್ಟ್ ಧರಿಸದೇ ಚಾಲನೆ, 7 ರೆಡ್ ಸಿಗ್ನಲ್ ಜಂಪ್, 5 ಚಾಲನೆ ಸಂದರ್ಭ ಮೊಬೈಲ್ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಲ್ ರದ್ದುಗೊಳಿಸಲಾಗಿದೆ.

ಇನ್ನು ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ 371 ವಾಹನಗಳ ವಿರುದ್ಧ ಕೇಸ್ ದಾಖಲಾಗಿದೆ. ಕರ್ಕಶ ಹಾರ್ನ್ ಬಳಕೆ 31, ಟಿಂಟ್ ಬಳಕೆ 23 ಪ್ರಕರಣಗಳು ದಾಖಲಾಗಿದೆ.

More articles

Latest article