Wednesday, October 18, 2023

ಈಜುಕೊಳದಲ್ಲಿ ಮುಳುಗಿ ಯುವಕ ಮೃತ್ಯು

Must read

ಉಳ್ಳಾಲ: ತಲಪಾಡಿ ಗಡಿಭಾಗದ ಬಾರೊಂದಕ್ಕೆ ಬಂದಿದ್ದ ನಾಲ್ವರು ಸ್ಥಳೀಯ ಲೇಔಟ್‌ನ ಕೊಳದಲ್ಲಿ ಈಜಲು ಹೋಗಿದ್ದು, ಅವರಲ್ಲಿ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕಾಸರಗೋಡು ಜಿಲ್ಲೆಯ ಹೊಸಂಗಡಿ, ದುರ್ಗಿ ಪಳ್ಳ ನಿವಾಸಿ ಹರೀಶ ಯಾನೆ ಹರಿಪ್ರಸಾದ್‌ ಆಚಾರ್ಯ ಮೃತರು ಎಂದು ತಿಳಿದುಬಂದಿದೆ.

ವೆಲ್ಡಿಂಗ್‌ ಕಾರ್ಯ ನಿರ್ವಹಿಸುತ್ತಿದ್ದ ಅವರು ಸೋಮವಾರ ತನ್ನ ಮೂವರು ಸ್ನೇಹಿತರೊಂದಿಗೆ ತಲಪಾಡಿಯ ಬಾರ್‌ಗೆ ಬಂದಿದ್ದು, ಬಳಿಕ ಸ್ನೇಹಿತರೊಂದಿಗೆ ಸ್ಥಳೀಯ ಲೇಔಟ್‌ನಲ್ಲಿದ್ದ ಕೊಳಕ್ಕೆ ತೆರಳಿದ್ದಾರೆ. ಎಲ್ಲರೂ ಈಜಾಡಿ ಮೇಲೆ ಬಂದರೆ ಹರಿಪ್ರಸಾದ್‌ ನೀರಿನಲ್ಲಿ ಮುಳುಗಿದ್ದಾರೆ.

ಹರಿಪ್ರಸಾದ್‌ಗೆ ಈಜಾಡಲು ಬರುತ್ತಿತ್ತಾದರೂ, ಆ ಸಂದರ್ಭದಲ್ಲಿ ಈಜಾಡಲು ಸಾಧ್ಯವಾಗಿರಲಿಲ್ಲ. ಮೂವರು ಸ್ನೇಹಿತರಲ್ಲಿ ಒಬ್ಬರು ಅವರ ರಕ್ಷಣೆಗೆ ಯತ್ನಿಸಿದರೂ ಸಾಧ್ಯವಾಗಿಲ್ಲ.

ಘಟನಾ ಸ್ಥಳಕ್ಕೆ ಮಂಗಳೂರಿನಿಂದ ಅಗ್ನಿ ಶಾಮಕ ದಳದವರು ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ಮೃತದೇಹ ಮೇಲಕ್ಕೆತ್ತಿದ್ದಾರೆ.

ಮೃತರು ಅವಿವಾಹಿತರಾಗಿದ್ದು, ತಾಯಿ, ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

More articles

Latest article