77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಸಿರೋಡಿನ ಕೋಳಿ ಅಂಗಡಿಯೊಂದರಲ್ಲಿ ತ್ರಿರಂಗದ ಕೋಳಿಗಳು ಎಲ್ಲರ ಗಮನ ಸೆಳೆಯಿತು.
ಬಿಸಿರೋಡಿನಲ್ಲಿರುವ ನಂದನ್ ಚಿಕನ್ ಅಂಗಡಿಯಲ್ಲಿ ಕೇಸರಿ,ಬಿಳಿ,ಹಸಿರು ಬಣ್ಣದಲ್ಲಿ ಕೋಳಿಗಳು ಕಂಗೊಳಿಸುವ ದೃಶ್ಯ ಕಂಡು ಬಂದಿದೆ.
ಅಜ್ಜಿ ಬೆಟ್ಟು ನಿವಾಸಿ ವಿದ್ಯಾ ಪ್ರಮೋದ್ ಅವರ ಮಗಳು ಪ್ರೀತಂ ಅವರಿಗೆ ಸೇರಿದ ಕೋಳಿ ಅಂಗಡಿಯಲ್ಲಿ ತ್ರಿವರ್ಣ ದ ಕೋಳಿಯನ್ನು ಕಾಣಬಹುದು.
ಪ್ರೀತಂ ಅವರೇ ಸ್ವತಃ ಮೂರು ಕೋಳಿಗಳಿಗೆ ಆಯಿಲ್ ಪೈಂಟ್ ನ್ನು ಹಚ್ಚಿದ್ದಾರೆ. ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ಆಕರ್ಷಣೀಯ ರೀತಿಯಲ್ಲಿ ಕೋಳಿಗೆ ಬಣ್ಣ ಹಚ್ಚಲಾಗಿದೆ. ಬಣ್ಣದ ಹಚ್ಚಿರುವ ಈ ಕೋಳಿಗಳನ್ನು ಗ್ರಾಹಕರಿಗೆ ನಾವು ನೀಡುವುದಿಲ್ಲ ಎಂಬುದನ್ನು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.