Wednesday, November 1, 2023

ಚಂದ್ರಯಾನ 3 ರ ಅಂತಿಮ ಸುತ್ತು ಪೂರ್ಣ : ಇಂದು ನೌಕೆಯಿಂದ ಹೊರ ಬರಲಿದ್ದಾನೆ ಲ್ಯಾಂಡರ್ ವಿಕ್ರಂ..!

Must read

ಚಂದ್ರಯಾನ 3 ನೌಕೆ ಚಂದ್ರನ ಐದನೇ ಹಾಗೂ ಕೊನೆಯ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ಈ ಮೂಲಕ ಆಗಸ್ಟ್​ 23ರಂದು ಚಂದ್ರನ ಕಕ್ಷೆಯ ಮೇಲೆ ಇಳಿಯಲು ದಿನಗಣನೆ ಆರಂಭವಾಗಿದೆ.

ಚಂದ್ರಯಾನ-3 ಕಡಿಮೆ ವೇಗದಲ್ಲಿ ನೌಕೆಯನ್ನು ಕೊಂಡೊಯ್ಯುವ ಮೂಲಕ ದಕ್ಷಿಣ ಧ್ರುವದಲ್ಲಿ ಸಾಫ್ಟ್​ ಲ್ಯಾಂಡಿಂಗ್ ಮಾಡಲಿದೆ. ನೌಕೆಯಿಂದ ಲ್ಯಾಂಡರ್​ ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿಕ್ಕಿದ್ದು, ಚಂದನಿಗೆ ಮತ್ತಷ್ಟು ಹತ್ತಿರವಾಗಲಿದೆ. ಆರು ದಿನಗಳ ನಂತರ ಚಂದ್ರನ ಬಳಿ ಯಶಸ್ವಿಯಾಗಿ ಲ್ಯಾಂಡ್​ ಆಗಲಿದೆ.

ಕಳೆದ ಜುಲೈ 14ರಂದು ಉಡಾವಣೆಯಾಗಿದ್ದ ಚಂದ್ರಯಾನ-3 ತನ್ನ ಯಶಸ್ವಿ ಪ್ರಯಾಣವನ್ನು ಮುಂದುವರಿಸಿದೆ. ಆಗಸ್ಟ್ 5ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ಚಂದ್ರಯಾನ 3 ಇಂದು ಚಂದ್ರನ 5ನೇ ಹಾಗೂ ಅಂತಿಮ ಕಕ್ಷೆಯನ್ನು ಪ್ರವೇಶಿಸಿದೆ. ನಾಳೆ ಲ್ಯಾಂಡಲ್ ಮಾಡ್ಯೂಲ್‌ನಿಂದ ಪ್ರೊಪಲ್ಟನ್ ಮಾಡ್ಯೂಲ್ ಅನ್ನು ಪ್ರತ್ಯೇಕಿಸಲಾಗುತ್ತಿದೆ. ಎಲ್ಲಾ ಅಂದುಕೊಂಡತೆ ಆದರೆ ಇದೇ ಆಗಸ್ಟ್ 23ರಂದು ಸಂಜೆ 5:47 ಕ್ಕೆ ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಇದು ಯಶಸ್ವಿಯಾದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಐತಿಹಾಸಿಕ ಸಾಧನೆಯಾಗಲಿದೆ. ಅಲ್ಲದೇ ಚಂದ್ರನ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಸಹಾಯಕವಾಗಲಿದೆ.

More articles

Latest article