Sunday, October 29, 2023

ಚಂದ್ರನ ಮೇಲೆ ಇಳಿಯೋ ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ್ದ ವಿಡಿಯೋ ರಿಲೀಸ್ ಮಾಡಿದ ಇಸ್ರೋ

Must read

ವಿಕ್ರಮ್​ ಲ್ಯಾಂಡರ್​ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆದ ಬಳಿಕ ಪ್ರಗ್ಯಾನ್ ಜೊತೆ ಕಾರ್ಯ ನಿರ್ವಹಿಸುತ್ತಿದೆ. ಈ ಸುಂದರ ದೃಶ್ಯವನ್ನು ಲ್ಯಾಂಡರ್​ನಲ್ಲಿರುವ ಇಮೇಜರ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಇಸ್ರೋ ಒಂದು ವಿಡಿಯೋವನ್ನು ಹಂಚಿಕೊಂಡಿದೆ. ಸದ್ಯ ಬಿಡುಗಡೆ ಮಾಡಲಾದ ವಿಡಿಯೋದಲ್ಲಿ ಲ್ಯಾಂಡರ್​ನಿಂದ ರೋವರ್ ಅಥವಾ ಪ್ರಗ್ಯಾನ್​ ಹೇಗೆ ಇಳಿಯಿತು ಎಂಬುದು ದೃಶ್ಯಗಳಲ್ಲಿ ಕಾಣಬಹುದಾಗಿದೆ.

ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ವಿಕ್ರಮ್​ ಯಶಸ್ವಿಯಾಗಿ ಇಳಿದ ಬಳಿಕ ಇಸ್ರೋ ಸಂಸ್ಥೆ ಯೋಜಿಸಿದಂತೆ ವಿಕ್ರಮ್​ನಿಂದ ರೋವರ್​ ಅಥವಾ ಪ್ರಗ್ಯಾನ್ ಹೊರ ಬಿಂದು ಚಂದ್ರನ ಮೇಲ್ಮೈ ಮೇಲೆ ಇಳಿದಿದೆ. ಈ ಸುಂದರ ದೃಶ್ಯವನ್ನು ಲ್ಯಾಂಡರ್​ನಲ್ಲಿರುವ ಇಮೇಜರ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು 2.17 ನಿಮಿಷಗಳ ವಿಡಿಯೋ ಇದಾಗಿದ್ದು. ಲ್ಯಾಂಡಿಂಗ್​ಗೂ ಮುನ್ನ ವಿಕ್ರಮ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಂದ್ರನ ದಕ್ಷಿಣ ಧ್ರವದ ಮೇಲ್ಮೈಯನ್ನು ಇದರಲ್ಲಿ ಕಾಣಬಹುದಾಗಿದೆ.

 

 

 

More articles

Latest article