Wednesday, October 18, 2023

ಬೊಳಂತೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲಿನ ಡೈರಿಗೆ ಶ್ರೀ ಕ್ಷೇತ್ರದ ಪೂಜ್ಯ ಖಾವಂದರು 2 ಲ.ರೂ. ಮಂಜೂರು : ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಿಗೆ ಮಂಜೂರು ಪತ್ರ ಹಸ್ತಾಂತರ

Must read

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ (ರಿ) ಇದರ “ಗ್ರಾಮ ಕಲ್ಯಾಣ ಯೋಜನೆಯ” ಕಾರ್ಯಕ್ರಮ ಅಡಿಯಲ್ಲಿ ಬಂಟ್ವಾಳ ತಾಲೂಕಿನ ಬೊಳಂತೂರು ಗ್ರಾಮದ ಬೊಳಂತೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲಿನ ಡೈರಿಗೆ ಶ್ರೀ ಕ್ಷೇತ್ರದ ಪೂಜ್ಯ ಖಾವಂದರು 2 ಲಕ್ಷ ರೂಪಾಯಿ ಮಂಜೂರು ಮಾಡಿದ್ದು ಸದರಿ ಮಂಜೂರಿ ಪತ್ರವನ್ನು ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಶೆಟ್ಟಿ ರವರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ರೈ ಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಯೋಜನೆಯ ಕಲ್ಲಡ್ಕ ವಲಯದ ಅಧ್ಯಕ್ಷೆ ತುಳಸಿ, ಬೋಳಂತೂರು ಒಕ್ಕೂಟ ಅಧ್ಯಕ್ಷೆ ಸೀತಾ, ಒಕ್ಕೂಟ ಸೇವಾ ಪ್ರತಿನಿಧಿ ಲೀಲಾವತಿ, ಒಕ್ಕೂಟ ಪದಾಧಿಕಾರಿಗಳಾದ ಸುಧಾಮಣಿ, ಬಿ ಮಹಮ್ಮದ್, ಸದಸ್ಯರಾದ ನಾರಾಯಣ ಟೈಲರ್, ಚಂದ್ರಶೇಖರ್, ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಕಾರ್ಯದರ್ಶಿ ಮೊದಲಾದವರು ಉಪಸ್ಥಿತರಿದ್ದರು.

More articles

Latest article