ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣೆಯಿಂದ ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆಗೊಂಡಿರುವ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರು ಬಂಟ್ವಾಳ ಠಾಣೆಯಿಂದ ರಿಲೀವ್ ಆಗಿದ್ದಾರೆ.
ಸದ್ಯ ವಿಟ್ಲ ಪೊಲೀಸ್ ಠಾಣೆಯ ಜೊತೆಗೆ ಬಂಟ್ವಾಳ ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣೆ ಎರಡು ಠಾಣೆಗಳ ಹೆಚ್ಚುವರಿ ಅಧಿಕಾರವನ್ನು ವಿಟ್ಲ ಇನ್ಸ್ ಪೆಕ್ಟರ್ ಎಚ್.ನಾಗರಾಜ್ ಅವರಿಗೆ ವಹಿಸಿದ್ದಾರೆ.
ವಿವೇಕಾನಂದ ಅವರ ತೆರವಿನ ಬಳಿಕ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಳಿಲ್ಲದೆ ಖಾಲಿಯಾಗಿದೆ.
ಕಳೆದ ಹೆಚ್ಚು ಕಮ್ಮಿ ಒಂದು ವರ್ಷಗಳ ಹಿಂದೆ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಟಿ.ಡಿ.ನಾಗರಾಜ್ ಅವರು ಕಾರ್ಕಳ ಠಾಣೆಗೆ ವರ್ಗಾವಣೆ ಯಾದ ಬಳಿಕ ಇಲ್ಲಿಗೆ ಯಾರು ಕೂಡ ಇನ್ಸ್ ಪೆಕ್ಟರ್ ನೇಮಕವಾಗಿಲ್ಲ.
ಜಿಲ್ಲೆಯ ಅತೀ ಸೂಕ್ಷ್ಮವಾದ ತಾಲೂಕಿಗಾಗಿರುವ ಬಂಟ್ವಾಳಕ್ಕೆ ಇನ್ಸ್ ಪೆಕ್ಟರ್ ಗಳಿಲ್ಲದೆ ಸೊರುಗುವ ಸ್ಥಿತಿ ನಿರ್ಮಾಣವಾದರೆ, ಇತ್ತ ಎಸ್. ಐ.ಗಳೇ ಹೆಚ್ಚಿನ ಜವಬ್ದಾರಿ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕಾದ ಸ್ಥಿತಿ.
ಇಲ್ಲಿನ ಕೋಮು ಸಹಿತ ಇನ್ನಿತರ ಅನೇಕ ಘಟನೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಬಂಟ್ವಾಳ ವೃತ್ತವನ್ನು ವಿಭಾಗ ಮಾಡಿದ ಪೊಲೀಸ್ ಇಲಾಖೆ ಬಂಟ್ವಾಳ ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣೆಗಳನ್ಜು ಇನ್ಸ್ ಪೆಕ್ಟರ್ ಠಾಣೆಗಳಾಗಿ ಮಾರ್ಪಾಡು ಮಾಡಲಾಯಿತು.
ಇದೀಗ ಎರಡು ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಗಳ ಹುದ್ದೆ ಖಾಲಿಯಾದ ಪರಿಣಾಮವಾಗಿ ಮತ್ತೆ ಒಬ್ಬರೇ ಇನ್ಸ್ ಪೆಕ್ಟರ್ ಗೆ ವೃತ್ತದ ಜವಬ್ದಾರಿ ನೀಡಲಾಗಿದೆ.
ಖಾಲಿಯಾದ ಬಂಟ್ವಾಳ ದ ಎರಡು ಠಾಣೆ ಗಳ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ಸರಕಾರ ಯಾವಾಗ ನೇಮಕ ಮಾಡುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.