Wednesday, April 10, 2024

ನಾಯಿಯ ಸಾವಿಗೆ ಕಣ್ಣೀರು ಹಾಕಿದ ಪೋಲೀಸರು: ಅನೇಕ ವರ್ಷಗಳ ಕಾಲ ಪೋಲೀಸ್ ಠಾಣೆಯ ಕಾವಲುಗಾರನಂತಿದ್ದ “ಬೊಗ್ಗಿಗೆ” ವಿದಾಯ….

ಬಂಟ್ವಾಳ: ಪೋಲೀಸ್ ಠಾಣೆಯ ಕಾವಲು ಕಾಯುತ್ತಿದ್ದ ” ಬೊಗ್ಗಿ” ಅಪಘಾತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಗೆ ಠಾಣೆಯ
ಪೋಲೀಸರು ಕಣ್ಣೀರು ಹಾಕಿದ ಅಪರೂಪದ ಸನ್ನಿವೇಶ ನಡೆಯಿತು.

ಇದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಡೆದ ಘಟನೆ.

ಬಂಟ್ವಾಳ ಪೋಲೀಸ್ ಠಾಣೆಯಲ್ಲಿ ಸುಮಾರು 7 ವರ್ಷಗಿಂತಲೂ ಹೆಚ್ಚಿನ ಅವಧಿಯಿಂದ ಪೋಲೀಸ್ ಠಾಣೆಯ ಸದಸ್ಯರಾಗಿದ್ದು ರಾತ್ರಿ ಪಾಳಿಯಲ್ಲಿ ಕಾವಲುಗಾರನಂತೆ ಶಿಸ್ತಿನ ಕೆಲಸ ಮಾಡುತ್ತಿದ್ದ ಹೆಣ್ಣು ನಾಯಿ ಕಾರು ಅಪಘಾತದಲ್ಲಿ ಶನಿವಾರ ರಾತ್ರಿ ಸುಮಾರು 9 ಗಂಟೆ ವೇಳೆ ಠಾಣೆಯ ಅವರಣದಲ್ಲಿಯೇ ಸಾವನ್ನಪ್ಪಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಠಾಣೆ ಕಾರಿನಲ್ಲಿ ಬಂದಿದ್ದ ವ್ಯಕ್ತಿ ತನ್ನ ಕೆಲಸ ಮುಗಿಸಿ ವಾಪಸು ಹೋಗುವ ವೇಳೆ ಕಾರನ್ನು ರಿವರ್ಸ್ ತೆಗೆಯುವಾಗ ಅಲ್ಲೇ ಮಲಗಿದ್ದ ನಾಯಿಯ ಮೇಲೆ ಆತನಿಗೆ ಗೊತ್ತಿಲ್ಲದೆ ಕಾರು ಹರಿದಿದೆ. ಗಂಭೀರವಾಗಿ ಗಾಯಗೊಂಡ ನಾಯಿ ಸ್ಥಳದಲ್ಲಿ ಯೇ ಸಾವನ್ನಪ್ಪಿದೆ.

ಘಟನೆಯನ್ನು ಕಂಡ ನಗರ ಠಾಣೆಯ ಪೋಲೀಸರು ಕಣ್ಣೀರು ಹಾಕಿದರು. ಬಳಿಕ ನಾಯಿಯನ್ನು ವಿಶೇಷ ಗೌರವ ನೀಡಿ ಮಣ್ಣು ಮಾಡಲಾಯಿತು.

ಕಾವಲು ಕಾಯುತ್ತಿತ್ತು : ಬೊಗ್ಗಿ

ನಾಯಿ ಸತ್ತಂತೆ ಒಂದು ಮಾತಿದೆ ಸಾಮಾನ್ಯ ನಾಯಿಗಳು ಸತ್ತಾಗ ದೊಡ್ಡ ವಿಚಾರವಾಗುವುದಿಲ್ಲ. ಆದರೆ ನಗರ ಪೋಲೀಸ್ ಠಾಣೆಯ ನಾಯಿ ಸತ್ತಾಗ ಪೋಲೀಸರ ಕಣ್ಣು ತೇವವಾಯಿತು. ಹೂ ಮಾಲೆಯೊಂದಿಗೆ ನಾಯಿಯ ಅಂತ್ಯ ಸಂಸ್ಕಾರ ಮಾಡಿದರು.
ಅನೇಕ ವರ್ಷಗಳಿಂದ ಈ ನಾಯಿ ಠಾಣೆಯ ಮೆಟ್ಟಿಲ ಮೇಲೆ ಮಲಗುತ್ತಿತ್ತು.

ಠಾಣೆಯೇ ಇದರ ಮನೆಯಾಗಿತ್ತು. ಬಹಳ ಬುದ್ದಿಯ ನಾಯಿಯಾಗಿ ಎಲ್ಲರ ಅಚ್ಚುಮೆಚ್ಚಿನ ಬೊಗ್ಗಿ ಎಂದೇ ಪ್ರಸಿದ್ಷಿಯಾಗಿತ್ತು.
ಪೋಲೀಸರಲ್ಲದೆ ಹೊರಗಿನವರು ಯಾರೇ ಅಪರಿಚಿತ ವ್ಯಕ್ತಿ ಗಳು ಬಂದರು ಬೊಗಳುವ ಈ ಬೊಗ್ಗಿ ಇನ್ನಿಲ್ಲ ಎಂದು ಪೋಲೀಸರು ಬೇಸರ ವ್ಯಕ್ತಪಡಿಸುತ್ತಾರೆ.

ಯಾರಿಗೂ ಈ ವರೆಗೆ ಕಚ್ಚಿಲ್ಲ,ಆದರೆ ಅಪರಿಚಿತರು ಯಾರು ಬಂದರೂ ಬಂದಿದ್ದಾರೆ ನೋಡಿ ಬೊಗಳುವ ಮೂಲಕ ಪೋಲೀಸರನ್ನು ಎಚ್ಚರಿಸುವ ಕೆಲಸ ಮಾಡುತ್ತಿತ್ತು.ಒಂದು ದಿನವೂ ಠಾಣೆಯನ್ನು ಬಿಟ್ಟು ಹೊರಗೆ ಹೋಗಿದ್ದಿಲ್ಲ ಎಂದು ಹೇಳುತ್ತಾರೆ.

ಹಣ್ಣಿನ ಗಿಡ ನೆಡುವ ಯೋಚನೆ
ನಾಯಿಯನ್ನು ಹೂತು ಹಾಕಿದ ಸ್ಥಳದಲ್ಲಿ ನಾಯಿಯ ನೆನಪಿಗೋಸ್ಕರ ಯಾವುದಾದರೂ ಪ್ರಾಣಿಗಳಿಗೆ ಆಹಾರ ನೀಡುವ ಹಣ್ಣಿನ ಮರವೊಂದನ್ನು ನೆಡವ ಸಂಕಲ್ಪವನ್ನು ಪೋಲೀಸರು ಮಾಡಿದ್ದಾರೆ.

More from the blog

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...

ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ

ಮಂಗಳೂರು ಹಾಗೂ ಬಿಸಿರೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ ಸೋಮವಾರ ಬಿಸಿರೋಡ್ ಶಾಖೆಯಲ್ಲಿ ನಡೆಯಿತು. ಟೀಚರ್ಸ್ ಟ್ರೈನಿಂಗ್ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಸ್ತುತ ವರ್ಷದಲ್ಲಿ ತಯಾರಿಸಿದ ಎಲ್ಲಾ ಕಲಿಕಾ...