Tuesday, October 31, 2023

ಬ್ರೈನ್‌ ಟ್ಯೂಮರ್‌ ನಿಂದ ಮಹಿಳೆ ಸಾವು

Must read

ಬೆಳ್ತಂಗಡಿ: ಬ್ರೈನ್‌ ಟ್ಯೂಮರ್‌ನಿಂದ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಿತ್ತಬಾಗಿಲು ಗ್ರಾಮದ ಕಿಲ್ಲೂರು ಸಮೀಪ ನಡೆದಿದೆ.

ಮಿತ್ತಬಾಗಿಲು ಗ್ರಾಮದ ಕಿಲ್ಲೂರು ಸಮೀಪದ ಗುತ್ತಿಗೆ ಬೆಟ್ಟು ನಿವಾಸಿ ಶಾರದಾ ಅವರು ಮೃತಪಟ್ಟ ಮಹಿಳೆ ಎಂದು ತಿಳಿದು ಬಂದಿದೆ.

ಶಾರದಾ ಅವರ ಪತಿ ಗೋಪಾಲ ಮೂಲ್ಯ ಕೂಡ ಮೂರು ವರ್ಷಗಳ ಹಿಂದೆ ಕಾಯಿಲೆಯಿಂದ ಮೃತಪಟ್ಟಿದ್ದರು. ಇನ್ನು ಶಾರದಾ ಅವರು ಆಶಾ ಕಾರ್ಯಕರ್ತೆಯಾಗಿ, ಬಂಗಾಡಿ ಸಹಕಾರಿ ಸಂಘದಲ್ಲಿ ಪಿಗ್ಮಿ ಸಂಗ್ರಾಹಕರಾಗಿಯೂ ಕಾರ್ಯನಿರ್ವಹಿಸಿದ್ದರು. ತೀರಾ ಕಷ್ಟದಲ್ಲಿ ಜೀವನ ಸಾಗಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದರು. ಈಗ ತಾಯಿಯ ಸಾವಿನಿಂದ ಮಕ್ಕಳ ಭವಿಷ್ಯ ಕಷ್ಟಕರವಾಗಿದೆ.

ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

 

More articles

Latest article