ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ,ಸ್ತೀಶಕ್ತಿ ಬ್ಲಾಕ್ ಸೊಸೈಟಿ, ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮ ಅಗಸ್ಟ್ 17 ರಂದು ಸ್ತ್ರೀ ಶಕ್ತಿ ಭವನ ಬಿ.ಸಿ.ರೋಡು ಇಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ನಗರ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಅಶ್ವಿನಿ,ಅವರು ಮಾತನಾಡಿ ಸ್ತನ್ಯ ಪಾನ ಸಪ್ತಾಹದ ಜಾಗೃತಿ ಕಾರ್ಯಕ್ರಮದ ಮೂಲಕ ತಾಯಿ ಮರಣ , ಮಕ್ಕಳ ಅಪೌಷ್ಟಿಕತೆಯನ್ನು ತಪ್ಪಿಸಲು ಕಾರ್ಯಕ್ರಮ ಅಗತ್ಯ. ಎಷ್ಟೋ ಮಕ್ಕಳಿಗೆ ಎದೆಹಾಲಿನ ಕೊರತೆಯಿಂದಾಗಿ ಮಗು ಮರಣ ಆಗುವುದು
ಮಕ್ಕಳಿಗೆ ತಾಯಿ ಹಾಲು ಶ್ರೇಷ್ಠ ಎದೆ ಹಾಲಿನಲ್ಲಿ ಸಿಗುವಂತಹ ಪೌಷ್ಟಿಕತೆ ಬೇರೆ ಯಾವ ಆಹಾರದಲ್ಲೂ ಸಿಗುವುದಿಲ್ಲ. 06 ತಿಂಗಳವರೆಗೆ ಕಡ್ಡಾಯವಾಗಿ ಮಗುವಿಗೆ ಎದೆ ಹಾಲು ಕೊಡಲೇಬೇಕು ಇದರಿಂದ ತಾಯಿಯ ಆರೋಗ್ಯಕ್ಕೂ ಉತ್ತಮ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾವತಿ ವಹಿಸಿದ್ದರು.
ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ರೀನಿಧಿ ಎದೆ ಹಾಲು ಉಣಿಸುವುದರ ಮಹತ್ವದ ಬಗ್ಗೆ ತಿಳಿಸಿದರು, ಡಾ.ಶ್ರುತಿ ಇವರು ಸ್ತನ ಕ್ಯಾನ್ಸರ್ ನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು, ನಾವು ತಿನ್ನುವ ಆಹಾರಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು,ಹಾಗೂ ಪರೀಕ್ಷೆ ಮಾಡುವ ವಿಧಾನಗಳ ಬಗ್ಗೆ ಸುಮನ ಕ್ರಾಸ್ತಾ ತಿಳಿಸಿದರು
ಸ್ತ್ರೀಶಕ್ತಿ ಶ್ಬ್ಲಾಕ್ ಸೊಸೈಟಿಯ ಅಧ್ಯಕ್ಷೆ ಸುಶ್ಮಿತಾ ವ್ಯಕ್ತಿ ಸಜೀಪ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಅರೋಗ್ಯ ಸುರಕ್ಷಾ ಅಧಿಕಾರಿ ಸುಮನಾ ಕ್ರಾಸ್ತಾ, ಎ.ಜೆ. ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ಹಿರಿಯ ಮೇಲ್ವೀಚಾರಕಿಯರಾದ ಶಾಲಿನಿ, ಗುಣವತಿ, ಮೇಲ್ವೀಚಾರಕಿಯರಾದ ನೀತಾ ಕುಮಾರಿ, ಸುಜಾತ,ಶೋಭಾ ಎಂ, ಯಶೋಧ ಉಪಸ್ಥಿತರಿದ್ದರು,
ಮೇಲ್ವೀಚಾರಕಿ ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು.ಹಿರಿಯ ಮೇಲ್ವೀಚಾರಕಿ ಗುಣವತಿ ಧನ್ಯವಾದ ನೀಡಿದರು.