Saturday, October 21, 2023

ಬಡಗಕಜೆಕಾರ್ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಬಿಜೆಪಿ ಸೇರ್ಪಡೆ

Must read

ಬಂಟ್ವಾಳ :ಬಡಗಕಜೆಕಾರು ಗ್ರಾಮ ಪಂಚಾಯತಿಯ ಕಾಂಗ್ರೆಸ್ ಬೆಂಬಲಿತ ಸದಸ್ಯೆ ರಾಜಿವಿ( ರಕ್ಷಿತಾ ) ಪಕ್ಷತೊರೆದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಇಂದು ತಮ್ಮ ನಿವಾಸದಲ್ಲಿ ಪಕ್ಷದ ಧ್ವಜ ನೀಡುವ ಮೂಲಕ ಭಾರತೀಯ ಜನತಾ ಪಾರ್ಟಿಗೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಉಪಾಧ್ಯಕ್ಷರಾದ ಚಿದಾನಂದ ಕಕ್ಯ, ಬೂಡದ ಅಧ್ಯಕ್ಷರಾದ ದೇವದಾಸ್ ಶೆಟ್ಟಿ, ಯುವ ಮೋರ್ಚಾದ ಕಾರ್ಯದರ್ಶಿಯಾದ ಸುದರ್ಶನ್ ಬಜ, ಬಡಗಕಜೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವದಾಸ್ ಅಬುರ, ಸದಸ್ಯರುಗಳಾದ ಸತೀಶ್ ಬಂಗೇರ, ಸುರೇಶ್ ಬಾರ್ದೊಟ್ಟು, ಉಷಾ, ಉಪಾಧ್ಯಕ್ಷರಾದ ಸುಗಂಧಿ, ಉಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ವಸಂತ ರಾಮನಗರ ಪಕ್ಷದ ಪ್ರಮುಖರಾದ ಸುರೇಶ್ ಮೈರಾ ದಿನೇಶ್ ಜೆ,ಯಶವಂತ್, ತಾರಾನಾಥ್ ಕಜೆಕಾರ್, ಪ್ರದೀಪ್, ಪ್ರವೀಣ್ ಗೌಡ, ಗಂಗಾಧರ ಪೂಜಾರಿ ಅಂಬಡೆ ಮಾರು, ಶಶಿಧರ್ ಮಡವು ಪ್ರವೀಣ್ ಮಾಡ, ಪ್ರಕಾಶ್ ಕರ್ಲ ಮತ್ತಿತರು ಉಪಸ್ಥಿತರಿದ್ದರು.

More articles

Latest article