Tuesday, October 17, 2023

ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಭದ ತರಗತಿ ಕೋಣೆಗಳಿಗೆ ಬಂಟ್ವಾಳ ಜೇಸಿಐ ವತಿಯಿಂದ ಕೊಡುಗೆಯಾಗಿ ನೀಡಿದ ಪ್ಯಾನೆಲ್ ಬೋರ್ಡ್ ವಿತರಣೆ

Must read

ಕಲ್ಲಡ್ಕ: ಶೈಕ್ಷಣಿಕ ಸಂಸ್ಥೆಗಳ ಭೌತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಹಲವಾರು ಸಂಘಟನೆಗಳು, ಸಂಘಸಂಸ್ಥೆಗಳ ಸಹಕಾರ ಮುಖ್ಯ ಪಾತ್ರ ವಹಿಸುತ್ತದೆ, ಮಕ್ಕಳಲ್ಲಿ ಸುಪ್ತವಾಗಿ ಇರುವ ಪ್ರತಿಭೆ ಹೊರತರಲು ಸೂಕ್ತವಾದ ವೇದಿಕೆಯ ಅಗತ್ಯವಿದೆ.ತರಗತಿ ಕೋಣೆಗಳೂ ಇದರ ಮೂಲ ಮೆಟ್ಟಿಲುಗಳಾಗಿವೆ ಎಂದು ಜೇಸಿಐ ವಲಯಾಧ್ಯಕ್ಷರಾದ ಜೇ ಎಫ್ ಡಿ ಪುರುಷೋತ್ತಮ ಶೆಟ್ಟಿ ಹೇಳಿದರು.

ಅವರು ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಭ ಇಲ್ಲಿ ತರಗತಿ ಕೋಣೆಗಳಿಗೆ ಬಂಟ್ವಾಳ ಜೇಸಿಐ ವತಿಯಿಂದ ಕೊಡುಗೆಯಾಗಿ ನೀಡಿದ ಪ್ಯಾನೆಲ್ ಬೋಡ್೯ ವಿತರಣೆ ಮಾಡಿ ಮಾತಾಡಿದರು.

ಬಂಟ್ವಾಳ ಜೇಸಿಐ ವತಿಯಿಂದ ಶಾಲೆಯ ಎಲ್ಲಾ ತರಗತಿಗಳಿಗೆ ಪ್ಯಾನೆಲ್ ಬೋಡ್೯ ನೀಡಿದ್ದು ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಬಂಟ್ವಾಳ ಜೆಸಿಐ ಅಧ್ಯಕ್ಷ ಜೇಸಿ ರಾಜೇಂದ್ರ ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಜೇಸಿಐ ವಲಯ ಉಪಾಧ್ಯಕ್ಷರಾದ ಜೆ ಎಫ್ ಡಿ ಅಜಿತ್ ಕುಮಾರ್ ಕೆ, ಜೇಸಿ ಕಾರ್ತಿಕ್, ಜೇಸಿ ರೋಶನ್ ರೈ , ಜೇಸಿ ಕಾರ್ಯದರ್ಶಿ ರಶ್ಮಿ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ವಿಜಯ ಶೇಖರ್ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ಸಹ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

More articles

Latest article