Wednesday, October 18, 2023

ಕು.ಭಾರತಿ ಕೊಲೆ ಮತ್ತು ದಲಿತ ಮುಖಂಡ ಶಿವಪ್ಪ ಬಂಗೇರ ಕೊಲೆ ಪ್ರಕರಣ ಮರು ತನಿಖೆಗೆ ಒತ್ತಾಯ, ಮುಖ್ಯಮಂತ್ರಿಗೆ ಮನವಿ.. ಮಾಜಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ನೇತ್ರತ್ವದ ಸಾರ್ವಜನಿಕ ಹೋರಾಟ ಸಮಿತಿಯಿಂದ ಮನವಿ

Must read

ಸೌಜನ್ಯ ಕೊಲೆ ಪ್ರಕರಣದ ಹೋರಾಟದ ಬಿಸಿಯ ಜೊತೆ 20 ವರ್ಷಗಳ ಹಿಂದೆ ನಡೆದ ಬಂಟ್ವಾಳದ ಸಿದ್ಧಕಟ್ಟೆಯ ಕು|ಭಾರತಿ ಕೊಲೆ ಮತ್ತು 22 ವರ್ಷಗಳ ಹಿಂದೆ ನಡೆದ ದಲಿತ ಮುಖಂಡ ಬಾಂಬಿಲ ಶಿವಪ್ಪ ಬಂಗೇರ ಕೊಲೆ ಪ್ರಕರಣದ ಮರು ತನಿಖೆ ನಡೆಸಲು ಒತ್ತಾಯಿಸಿ ಅಗಸ್ಟ್ 25 ರಂದು ಶುಕ್ರವಾರ ಬಂಟ್ವಾಳ ತಹಶಿಲ್ದಾರರ ಮೂಲಕ ಮಾಜಿ ಜಿ.ಪಂ. ಉಪಾಧ್ಯಕ್ಷ ಯಂ. ತುಂಗಪ್ಪ ಬಂಗೇರರ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ ನೀಡಲಾಯಿತು.

ಈ ಸಂಧರ್ಭದಲ್ಲಿ ಪಿಲಾತಬೆಟ್ಟು ಗ್ರಾ. ಪಂ ಅಧ್ಯಕ್ಷರಾದ ಶಾರದ,ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ವಿಜಯ ಕುಮಾರ್ ಸ. ಸೇ. ಸ. ಬೇಂಕ್ ಅಧ್ಯಕ್ಷ ಸುರೇಶ್ ಕುಲಾಲ್ ಪಿಲಾತಬೆಟ್ಟು ಗ್ರಾ. ಪಂ.ಸದಸ್ಯ ಲಕ್ಷ್ಮೀನಾರಾಯಣ ಹೆಗ್ಡೆ,ಹಿರಿಯರಾದ ಗಂಗಾಧರ ಪೂಜಾರಿ ಕಜೆಕಾರು, ತಾರಾನಥ್ ಕಜೆಕಾರು, ಮಧು ನಾಡೇಲು, ಪ್ರಭಾಕರ ಪಿ.ಯಂ, ಪ್ರಮೋದ್ ಕುಮಾರ್ ಮೂರ್ಜೆ ಇತರ ಅನೇಕ ನ್ಯಾಯಪರ ಹೋರಾಟಗಾರರು ಉಪಸ್ಥಿತರಿದ್ದರು.

More articles

Latest article