Thursday, October 26, 2023

ಅಪ್ರಾಪ್ತ ಶಾಲಾ ಬಾಲಕಿಯ ಕೈಹಿಡಿದು ಎಳೆದ ಆರೋಪಿ: ಪೋಕ್ಸೋ ಪ್ರಕರಣ ದಾಖಲು,ಆರೋಪಿ ಅರೆಸ್ಟ್

Must read

ಬಂಟ್ವಾಳ: ಶಾಲಾ ಬಾಲಕಿಯ ಕೈ ಹಿಡಿದು ಎಳೆದ ಆರೋಪಿಯೋರ್ವನ ಮೇಲೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು,ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸರಪಾಡಿ ಗ್ರಾಮದ ಕುದ್ಕುಂಜ ನಿವಾಸಿ ಸುಕೇಶ್ ಯಾನೆ ಸಿಕೇಶ ಎಂಬಾತನ ಆರೋಪಿಯಾಗಿದ್ದು,ಸದ್ಯ ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ‌‌‌.

‌‌ಬಾಲಕಿ ಒಬ್ಬಳೇ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಸುಕೇಶ್ ಗೌಡ ಎಂಬಾತ ಬಾಲಕಿಯ ಹಿಂದಿನಿಂದ ಹೋಗಿ ಬಾಲಕಿಯ ಕೈ ಹಿಡಿದು ಎಳೆದಿದ್ದಾನೆ. ಈತನ ದುರ್ಬುದ್ದಿಯ ಬಗ್ಗೆ ಮೊದಲೇ ಅರಿತುಕೊಂಡಿದ್ದ ಅಲ್ಲಿನ ರಿಕ್ಷಾಚಾಲಕರು ಸಂಶಯಗೊಂಡು , ಈತ ಬಾಲಕಿಯ ಬೆನ್ನ ಹಿಂದೆ ಹೋಗುವುದನ್ನು ನೋಡುತ್ತಿದ್ದರು. ಈತನ ಹಿಂಬಾಳಿಸಿಕೊಂಡು ಹೋದ ಚಾಲಕರು ಬಾಲಕಿಯ ಕೈ ಹಿಡಿದ ಕೂಡಲೇ ಈತನನ್ನು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಈತನ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ ಕೂಡಲೇ ಸ್ಥಳಕ್ಕೆ ಬಂದ ಪೋಲಿಸರು ಬಂಧಿಸಿದ್ದಾರೆ.

ಖತರ್ನಕ್ ಆರೋಪಿ
ವಿಪರೀತ ಕುಡಿತದ ಚಟಕ್ಕೆ ಬಿದ್ದಿರುವ ಸುಕೇಶ್ ಈ ಹಿಂದೆ ಎರಡು ಬಾರಿ ಇಂತಹುದೇ ಹಲ್ಕಾ ಕೆಲಸ ಮಾಡಿ ಸಿಕ್ಕಿಹಾಕಿಕೊಂಡಿದ್ದ ಎಂದು ಹೇಳಲಾಗಿದೆ,ಜೊತೆಗೆ ಸಾರ್ವಜನಿಕರಿಂದ ಗೂಸಾ ಕೂಡ ಪಡೆದುಕೊಂಡಿದ್ದ. ಆದರೂ ಈತನ ಚಾಳಿ ಕಡಿಮೆಯಾಗಿಲ್ಲ. ಮತ್ತೆ ಅದೇ ಚಾಳಿಯನ್ನು ಮುಂದುವರಿಸಿದ ಆರೋಪಿಯ ಬಗ್ಗೆ ಕೂಡಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು,ಪೋಲೀಸರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

More articles

Latest article