Wednesday, October 18, 2023

ಶ್ರೀ ಕನಪಾಡಿತ್ತಾಯ ದೈವದ ಭಂಡಾರ ಸಾಗುವ ದಾರಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣವಾದ ಕಾಲು ಸೇತುವೆಯನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್

Must read

ಕಳ್ಳಿಗೆ – ಬಿ.ಮೂಡ ಗ್ರಾಮಸ್ಥರ ಬಹುವರ್ಷದ ಬೇಡಿಕೆಯಾದ ಪೆರಿಯೋಡಿ ಬೀಡುವಿನಿಂದ ಕುಪ್ಪಿಲ ಧರ್ಮ ಚಾವಡಿಗೆ ಶ್ರೀ ಕನಪಾಡಿತ್ತಾಯ ದೈವದ ಭಂಡಾರ ಸಾಗುವ ದಾರಿಗೆ ಶಾಸಕರ 20 ಲಕ್ಷ ರೂ ಅನುದಾನದಲ್ಲಿ ಕಾಲು ಸೇತುವೆ ನಿರ್ಮಿಸಲಾಗಿದ್ದು ಇಂದು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು.

ಬಿಜೆಪಿ ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಪುರಸಭಾ ಸದಸ್ಯೆ ಚೈತನ್ಯ ಎ ದಾಸ್, ಗಣೇಶ್ ದಾಸ್, ಕಳ್ಳಿಗೆ ಗ್ರಾಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಉಪಾಧ್ಯಕ್ಷೆ ವಾರಿಜ ಚಂದ್ರಿಗೆ, ಸುಪ್ರೀತ್ ಆಳ್ವ, ವಿಠ್ಠಲ ಶೆಟ್ಟಿ ಕುಪ್ಪಿಲಗುತ್ತು, ರಮಾನಾಥ ರೈ ಕುಪ್ಪಿಲಗುತ್ತು, ಜ್ಯೋತೀಂದ್ರ ಶೆಟ್ಟಿ ಮುಂಡಾಜೆಗುತ್ತು, ದಿವಾಕರ ಶೆಟ್ಟಿ ಪರಾರಿಗುತ್ತು, ದಿವಾಕರ ಶೆಟ್ಟಿ ಕುಪ್ಪಿಲಗುತ್ತು, ಅರುಣ್ ಶೆಟ್ಟಿ ಪೇರ್ಲಬೈಲ್ ಗುತ್ತು, ವೇಣುಗೋಪಾಲ ಶೆಟ್ಟಿ ಮೊಡಂಕಾಪುಗುತ್ತು, ಸತೀಶ್ ಶೆಟ್ಟಿ ಮೊಡಂಕಾಪುಗುತ್ತು, ಜನಾರ್ಧನ ಸಾಲ್ಯಾನ್ ಮುಂಡಾಜೆ, ಭೋಜ ದರಿಬಾಗಿಲು, ಧೂಮಪ್ಪ ದರಿಬಾಗಿಲು, ಮನೋಜ್ ವಳವೂರು, ದೇವಿಪ್ರಸಾದ್ ಎಂ ದೇವಂದಬೆಟ್ಟು, ಯೋಗೀಶ್ ದರಿಬಾಗಿಲು, ಯೋಗೀಶ್ ವಿ.ಕೆ, ಶ್ರೀಕಾಂತ್ ದರಿಬಾಗಿಲು, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ಸತೀಶ್ ಪಲ್ಲಮಜಲು ಮತ್ತಿತರರು ಉಪಸ್ಥಿತರಿದ್ದರು.

More articles

Latest article