Wednesday, October 18, 2023

ಪಡಿತರ ಚೀಟಿದಾದರರಿಗೆ ಆಹಾರ ನಿಗಮದಿಂದ ವಿತರಣೆಯಾದ ಅಕ್ಕಿಯಲ್ಲಿ ಗೋಲ್ ಮಾಲ್….. ಕೋಟ್ಯಾಂತರ ರೂ ಮೌಲ್ಯದ ಅವ್ಯವಹಾರದ ಆರೋಪ….. ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿಗೆ ಶಾಸಕ ರಾಜೇಶ್ ನಾಯ್ಕ್ ಪತ್ರ

Must read

ಬಂಟ್ವಾಳ; ಬಂಟ್ವಾಳ ತಾಲೂಕಿನ‌ ಪಡಿತರ ಚೀಟಿದಾರರ ಅಕ್ಕಿಯಲ್ಲಿ ಗೋಲ್ ಮಾಲ್…. ಕೋಟ್ಯಾಂತರ ರೂ ಗಳ ಅವ್ಯವಹಾರದ ಶಂಕೆ….. ತನಿಖೆಗಾಗಿ ಜಿಲ್ಲಾಧಿಕಾರಿಗೆ ಒತ್ತಾಯ……

ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ಬಿಸಿರೋಡಿನ ಗೊಡೌನ್ ಒಂದಕ್ಕೆ ವಿತರಣೆಯಾದ ನಿರ್ದಿಷ್ಟವಾದ ಅಕ್ಕಿ ಗೋಣಿಗಳು ದಾಸ್ತಾನು ಕೊಠಡಿಯಲ್ಲಿ ಇಲ್ಲದೆ ಕಾಣೆಯಗಿದೆ ಎಂಬ ದೂರುಗಳು ಕೇಳಿ ಬಂದಿವೆ…ಸರಕಾರದಿಂದ ನಿರ್ದಿಷ್ಟವಾಗಿ ಲೆಕ್ಕಾಚಾರದೊಂದಿಗೆ ಗೊಡೌನ್ ಗೆ ಬಂದಿದ್ದ ಅಕ್ಕಿ ಗೋಣಿಗಳು ಎಲ್ಲಿ ಹೋಗಿವೆ,ಹೇಗೆ ಹೋಗಿವೆ ಎಂಬುದು ಯಕ್ಷ ಪ್ರಶ್ನೆ ಯಾಗಿದ್ದು, ಇದರ ತನಿಖೆಯಾಗಬೇಕು ಎಂದು ಸಾರ್ವಜನಿಕ ಒತ್ತಾಯವಾಗಿದೆ.

ತಾಲೂಕಿನ ಸೊಸೈಟಿಗಳು ಪಡಿತರ ಚೀಟಿದಾರರಿಗೆ ವಿತರಿಸಲು ಬಿಸಿರೋಡು ತಲಪಾಡಿ ಎಂಬಲ್ಲಿ ಇರುವ ಗೊಡೌನ್ ಗೆ ಆಹಾರ ನಿಗಮದಿಂದ ಬಂದಿರುವ ಅಕ್ಕಿಯಲ್ಲಿ ಸುಮಾರು 40 ಲೋಡ್ ಅಂದರೆ ಅಂದಾಜು ಒಂದುವರೆ ಕೋಟಿ ರೂ ಮೌಲ್ಯದ ಅಕ್ಕಿ ಯ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎನ್ನಲಾಗಿದೆ. ಅಂದರೆ ದಾಸ್ತಾನು ಕೊಠಡಿಯಲ್ಲಿ ಇರಬೇಕಾದ ಅಕ್ಕಿ ಅಲ್ಲಿರದೆ ಎಲ್ಲಿ ಮಾರಾಟವಾಗಿದೆ ಎಂಬುದು ಸಂಶಯವಾಗಿದೆ.

*ಜಿಲ್ಲಾಧಿಕಾರಿಗೆ ಶಾಸಕರ ಪತ್ರ: ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು*

ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ವಿತರಣೆಯಾದ ಅಕ್ಕಿ ಅವ್ಯವಹಾರವಾಗಿರುವ ಬಗ್ಗೆ ಸಾರ್ವಜನಿಕ ದೂರುಗಳು ಕೇಳಿ ಬಂದಿದ್ದು ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದಾರೆ.

 

ಸಂಬಂದಪಟ್ಟಂತ ಬಂಟ್ವಾಳ ತಾಲೂಕಿನ ಪಡಿತರದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ಸರಬರಾಜಾದ ಪಡಿತರ ಅಕ್ಕಿಯು ಗೋದಾಮಿನಲ್ಲಿ ದುರುಪಯೋಗ ಅವ್ಯವಹಾರ ಆಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗುಮಾನಿ ಇದ್ದು ಈ ಕುರಿತು ನನಗೆ ದೂರುಗಳು ಬಂದಿರುತ್ತವೆ, ಆದುದರಿಂದ ತಾವು ತಕ್ಷಣ ಈ ಕುರಿತು ವೈಯಕ್ತಿಕ ಗಮನ ಹರಿಸಿ ಅಕ್ಕಿ ದಾಸ್ತಾನು ಪರಿಶೀಲಿಸಿ ತಪ್ಪಿತಸ್ತರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

*ಎ.ಸಿ.ಬೇಟಿ ಪರಿಶೀಲನೆ*

ಶಾಸಕರ ದೂರಿನ ಬೆನ್ನಲ್ಲೇ ಮಂಗಳೂರಿನ ಸಹಾಯಕ ಆಯುಕ್ತ ಹಾಗೂ ತಾಲೂಕಿನ ದಂಡಾಧಿಕಾರಿ ಗೊಡೌನ್ ಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಲೆಕ್ಕಾಚಾರ ದ ಸ್ಪಷ್ಟವಾದ ಮಾಹಿತಿಯನ್ನು ಕಲೆಹಾಕುತ್ತಿದ್ದು, ಮತ್ತು ತನಿಖೆಯ ದೃಷ್ಟಿಯಿಂದ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಗೊಡೌನ್ ನಲ್ಲಿ ಎಷ್ಟು ಮೌಲ್ಯದ ಅಕ್ಕಿಯ ಅವ್ಯವಹಾರ ನಡೆದಿದೆ ಮತ್ತು ಯಾವ ಯಾವ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ವಿವರವಾಗಿ ತಿಳಿಸುತ್ತೇವೆ ಎಂದು ತಾಲೂಕಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‌ ಈ ಗೊಡೌನ್ ಯಾರಿಗೆ ಸೇರಿದ್ದಾಗಿದೆ, ದಾಸ್ತಾನು ನೋಡಿಕೊಳ್ಳಲು ಇರುವ ಜವಬ್ದಾರಿಯುತ ಸಿಬ್ಬಂದಿ ಕೋಟ್ಯಾಂತರ ರೂ ಮೌಲ್ಯದ ಸೊತ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಿದ್ದಾರಾ? ಅಥವಾ ಗೊಡೌನ್ ಗೆ ಬರದೆ ಜಿಲ್ಲಾ ಹಂತದಲ್ಲೇ ಮಾರಾಟ ವಾಗಿದಾ? ಹೀಗೆ ಅನೇಕ ಪ್ರಶ್ನೆ ಗಳು ಸಾರ್ವಜನಿಕ ವಲಯದಲ್ಲಿ ಮೂಡಿಬಂದಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ತಾಲೂಕಿನ ಅಧಿಕಾರಿಗಳ ತನಿಖೆಯ ಬಳಿಕ ಸ್ಪಷ್ಟವಾದ ಚಿತ್ರಣ ಸಿಗಲಿದೆ.ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಬೇಕು.

More articles

Latest article